ಮಾರಾಟಕ್ಕೆ ನಿಷೇಧವಿದ್ದ ಸಿಮೆಂಟ್ ಮಾರಾಟ-ತಹಶೀಲ್ದಾರ್ ನೇತೃತ್ವದಲ್ಲಿ ತಂಡ ದಾಳಿ

ಮಾರಾಟಕ್ಕೆ ನಿಷೇಧವಿದ್ದ ಸಿಮೆಂಟ್ ಮಾರಾಟ-ತಹಶೀಲ್ದಾರ್ ನೇತೃತ್ವದಲ್ಲಿ ತಂಡ ದಾಳಿ

ಬಂಟ್ವಾಳ: ಮಾರಾಟ ಮಾಡಲು ಅವಕಾಶ ಇಲ್ಲದ ಸಿಮೆಂಟ್ ನ್ನು ಮನೆಕಟ್ಟುಲು ಬಳಕೆಮಾಡುವ ಉದ್ದೇಶದಿಂದ ಸಿಮೆಂಟ್ ದಾಸ್ತಾನು ಇರಿಸಲಾಗಿದ್ದ ಜಾಗಕ್ಕೆ ಬಂಟ್ವಾಳ ತಹಶಿಲ್ದಾರ್ ನೇತ್ರತ್ವದ ತಂಡ ದಾಳಿ ನಡೆಸಿ ಸಿಮೆಂಟ್ ನ್ನು ವಶಕ್ಕೆ ಪಡೆದುಕೊಂಡಿದೆ.

ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಬಳಿಕ ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಪುರಸಭೆಗೆ ಪ್ರಕರಣವನ್ನು ನೀಡಲಾಗಿದೆ. ಪಲ್ಲಮಜಲು ನಿವಾಸಿ ಸೋಮಸುಂದರ ಕೆ‌. ಅವರ ಮನೆ ನಿರ್ಮಾಣಕ್ಕೆ ಮಾರಾಟಕ್ಕೆ ಅವಕಾಶವಿಲ್ಲದ 21 ಸಿಮೆಂಟ್ ಗೋಣಿ ಚೀಲಗಳು ಸ್ಥಳದಲ್ಲಿ ಪತ್ತೆಯಾಗಿದೆ, ಇದರ ಜೊತೆಗೆ ಖಾಲಿಯಾದ ಐದು ಗೋಣಿ ಸಿಮೆಂಟ್ ಚೀಲಗಳು ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

Leave a Reply

You May Have Missed

error: Content is protected !!