ಸರಣಿ ಅಪಘಾತ: ನಾಲ್ವರಿಗೆ ಗಾಯ

ಸರಣಿ ಅಪಘಾತ: ನಾಲ್ವರಿಗೆ ಗಾಯ

ಪಡುಬಿದ್ರಿ: ಅಪಘಾತ ವಲಯವಾಗಿ ಗುರುತಿಸಲ್ಪಟ್ಟಿರುವ ಪಡುಬಿದ್ರಿ ಜಂಕ್ಷನ್‌ನಲ್ಲಿ ಮಂಗಳವಾರ ಬೆಳಗ್ಗೆ ಸರಣಿ ಅಪಘಾತವಾಗಿ ಬಸ್‌ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ.

ಪಡುಬಿದ್ರಿಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಸಂಧಿಸುವ ಮುಖ್ಯ ಭಾಗದಲ್ಲಿ ಮೂಲ್ಕಿಯ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಬಸ್‌ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾಗಿತ್ತು. ಬಳಿಕ ಕಾರ್ಕಳ ರಸ್ತೆ ಬದಿ ಇರಿಸಿದ್ದ ಟ್ರಾಫಿಕ್‌ ಬೂತ್‌ಗೆ ಢಿಕ್ಕಿಯಾದ ಬಸ್‌ ಮುಂದೆ ಸಾಗಿ ಬಾಡಿಗೆಗಾಗಿ ನಿಲ್ಲಿಸಿದ್ದ ರಿಕ್ಷಾವೊಂದಕ್ಕೆ ಢಿಕ್ಕಿಯಾಗಿದೆ. ರಿಕ್ಷಾ ಚಾಲಕ ಅಪಘಾತದ ಮುನ್ಸೂಚನೆಯನ್ನರಿತು ರಿಕ್ಷಾ ಬಿಟ್ಟು ಸ್ಥಳದಿಂದ ದೂರ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಿಕ್ಷಾಕ್ಕೆ ಗುದ್ದಿದ ಬಸ್‌ ನಿಂತಿದೆ. ರಿಕ್ಷಾ ಪಲ್ಟಿಯಾಗಿ ಜಖಂಗೊಂಡಿದೆ.

ಅಪಘಾತದಿಂದಾಗಿ ಬಸ್‌ ನಿರ್ವಾಹಕ ಪ್ರಮೋದ್‌, ಬಸ್‌ ಪ್ರಯಾಣಿಕ ದಯಾನಂದ ಮೂಲ್ಕಿ ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!