ನಿಯೋಜಿತ ಸಿ ಎಂ ಗಾಗಿ ಸರಕಾರವು ಖರೀದಿಸಿದ ನೂತನ ಕಾರು ಯಾವುದು? ಬೆಲೆ ಏನು?

ನಿಯೋಜಿತ ಸಿ ಎಂ ಗಾಗಿ ಸರಕಾರವು ಖರೀದಿಸಿದ ನೂತನ ಕಾರು ಯಾವುದು? ಬೆಲೆ ಏನು?

ಕಾಂಗ್ರೆಸ್‌ನಿಂದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಆಗುತ್ತಿದ್ದಂತೆ, ಸರ್ಕಾರದಿಂದ ಹೊಸ ಕಾರು ಖರೀದಿ ಮಾಡಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಪಟ್ಟ ಒಲಿಯುತ್ತಿದ್ದಂತೆಯೇ ಸಿದ್ದರಾಮಯ್ಯ ಅವರಿಗಾಗಿ ಸರ್ಕಾರದಿಂದ ಹೊಸ ಕಾರು ಖರೀದಿ ಮಾಡಲಾಗಿದೆ. ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಟೊಯೋಟೊ ವೆಲ್ಫೇರ್‌ ಕಾರನ್ನು ಸಿಎಂಗಾಗಿ ಖರೀದಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಆಡಳಿತ ಮತ್ತು ಸುಧಾರಣಾ ಇಲಾಖೆಯಿಂದ ಕಾರನ್ನು ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಮುಂದೆ ಸಿದ್ದರಾಮಯ್ಯ ಹೊಸ ಕಾರಿನಲ್ಲಿ ಓಡಾಡಲಿದ್ದಾರೆ.
ಇನ್ನು ಶನಿವಾರ ಮಧ್ಯಾಹ್ನ ಸಿದ್ದರಾಮಯ್ಯ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

Leave a Reply

You May Have Missed

error: Content is protected !!