ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಢಿಕ್ಕಿ; ಓರ್ವ ಗಂಭೀರ ಗಾಯ

ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಢಿಕ್ಕಿ; ಓರ್ವ ಗಂಭೀರ ಗಾಯ

ಚಾರ್ಮಾಡಿ: ಇಲ್ಲಿಯ ಚಾರ್ಮಾಡಿಯ ಕೃಷ್ಣನಗರ ಪಾಂಡಿಕಟ್ಟೆಯಲ್ಲಿ ಕಾರು ಬ್ರೇಕ್ ಫೈಲ್ ಆಗಿ ಧರೆಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವರು ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸಾಗರ ಕಡೆಯಿಂದ ಕುಟುಂಬವೊಂದು ಕಾರಿನಲ್ಲಿ ಬರುತ್ತಿರುವ ಸಮಯ ಕಾರು ಬ್ರೇಕ್ ಫೈಲ್ ಆಗಿ ಘಾಟಿಯ ಧರೆಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನಲ್ಲಿದ್ದ ವಿನೋದ್ ಸಾಗರ ಎಂಬುವವರು ಗಂಭೀರ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ಕು ಮಂದಿ ಮಹಿಳೆಯರಿಗೂ ಗಾಯಗಳಾಗಿದೆ.

ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ತಕ್ಷಣ ದಾಖಲಿಸಿದ್ದು, ವಿನೋದ್ ಅವರನ್ನು ಉಜಿರೆಯ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರ ಇನ್ನಷ್ಟೇ ಲಭಿಸ ಬೇಕಾಗಿದೆ.

Previous post

ಯಕ್ಷಗಾನ, ನಾಟಕ, ತಾಳಮದ್ದಳೆ ಜೀವಂತಿಕೆಯನ್ನು ಬಿಂಬಿಸುವುದರ ಜತೆ ಘನತೆ, ಗೌರವ, ನೈಜತೆಯನ್ನು ಹೆಚ್ಚಿಸುತ್ತದೆ – ಡಾ.ಹೇಮಾವತಿ ವೀ.ಹೆಗ್ಗಡೆ

Next post

ಹರೀಶ್ ಪೂಂಜಾ ಪರ ಚುನಾವಣಾ ಪ್ರಚಾರ, ವಿಜಯೋತ್ಸವದಲ್ಲಿ ಭಾಗಿ: ಉಜಿರೆ ಗ್ರಾ.ಪಂ.ಸಿಬ್ಬಂದಿ ಅಮಾನತು

Leave a Reply

You May Have Missed

error: Content is protected !!