ಬೈಕ್‌ಗೆ ಬಸ್ ಢಿಕ್ಕಿ ಖಾಸಗಿ ಕಾಲೇಜು ವಿದ್ಯಾರ್ಥಿ ಮೃತ್ಯು

ಬೈಕ್‌ಗೆ ಬಸ್ ಢಿಕ್ಕಿ ಖಾಸಗಿ ಕಾಲೇಜು ವಿದ್ಯಾರ್ಥಿ ಮೃತ್ಯು

ಮೂಡುಬಿದಿರೆ: ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರಿನ ಹಂಡೇಲು ಎಂಬಲ್ಲಿ ಖಾಸಗಿ ಬಸ್‌ಬೈಕ್‌ಗೆ ಸೋಮವಾರ ಸಾಯಂಕಾಲ ಢಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ, ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆಳ್ವಾಸ್ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಎಡಪದವು ರಾಜೇಶ್ವರೀ ಜ್ಯುವೆಲರ್ಸ್’ನ ಚಂದ್ರಹಾಸ ಆಚಾರ್ಯ ಅವರ ಪುತ್ರ ಕಾರ್ತಿಕ್ ಆಚಾರ್ಯ(19) ಮೃತಪಟ್ಟವರು.
ಸಹಸವಾರ ಅದೇ ಕಾಲೇಜಿನ ವಿದ್ಯಾರ್ಥಿ ಹರ್ಷ ಎಂಬವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಕಾರ್ತಿಕ್ ಅವರು ಕಾಲೇಜು ಮುಗಿಸಿ ತನ್ನ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದ್ದ ಖಾಸಗಿ ಎಕ್ ಪ್ರೆಸ್ ಬಸ್ ಮತ್ತೊಂದು ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ತೀರ ಬಲಭಾಗಕ್ಕೆ ಚಲಿಸಿ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಕಾರ್ತಿಕ್ ಹೆಲ್ಮೆಟ್ ಧರಿಸಿದ್ದರೂ ಬಸ್ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಅಮಾಯಕ ಜೀವ ಬಲಿಯಾಗಿದೆ. ಮೂಡುಬಿದಿರೆ ಪೊಲೀಸರು ಬಸ್‌ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a Reply

You May Have Missed

error: Content is protected !!