ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ,ಸನ್ಮಾನ ಕಾರ್ಯಕ್ರಮ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ,ಸನ್ಮಾನ ಕಾರ್ಯಕ್ರಮ

ಫೋಟೋ: ಜಿತೇಂದ್ರ ಗೋಖಲೆ ಸೌತಡ್ಕ

ನೇಸರ ಜ.8: ಕೊಕ್ಕಡ-ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮಂಡಳಿ ಇವರಿಂದ, ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಸೌತಡ್ಕ(ರಿ)ನ ಸೇವಾರ್ಥ “ಶ್ರೀ ದೇವಿ ಮಹಾತ್ಮೆ” ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.
ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ದಾಮೋದರ ಶೆಟ್ಟಿ ನೂಜೆ,ದಿನೇಶ್ ಭಟ್ ಇವರ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಮತ್ತು ಸುಬ್ರಹ್ಮಣ್ಯ ತೋಡ್ತಿಲ್ಲಾಯರ ನೇತ್ರತ್ವದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ರವರನ್ನು ಸನ್ಮಾನಿಸಲಾಯಿತು. ಗೌರವಸ್ವೀಕರಿಸಿ ಮಾತನಾಡಿದ ಅವರು ಈ ಸನ್ಮಾನ ದೇವಸ್ಥಾನದ ಆಡಳಿತ ಮಂಡಳಿಗೆ ಸಂದ ಗೌರವ.ಎಲ್ಲರ ಪರವಾಗಿ ನಾನು ನಿಮಗೆ ಅಬಾರಿಯಾಗಿದ್ದೇನೆ.ಈ ರೀತಿಯ ಸೇವಾಕಾರ್ಯ ಮೂಲಕ ಇನ್ನಷ್ಟು ಕ್ಷೇತ್ರ ಬೆಳೆಯಲಿ ಎಂದು ಹಾರೈಸಿದರು.ವೇದಿಕೆಯಲ್ಲಿ ಶ್ರೀ ಮಹಾಗಣಪತಿ ಸೌತಡ್ಕ ಸೇವಾ ಟ್ರಸ್ಟಿನ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.ಸುಧೀರ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

Leave a Reply

You May Have Missed

error: Content is protected !!