ಟಿಪ್ಪರ್, ಸ್ಕೂಟರ್ ಡಿಕ್ಕಿ ಇಚ್ಲಂಪಾಡಿಯ ಯುವಕ ದುರ್ಮರಣ

ಟಿಪ್ಪರ್, ಸ್ಕೂಟರ್ ಡಿಕ್ಕಿ ಇಚ್ಲಂಪಾಡಿಯ ಯುವಕ ದುರ್ಮರಣ

ನೆಲ್ಯಾಡಿ: ಮಂಗಳೂರಿನ ಪಂಪ್ ವೆಲ್ ನಲ್ಲಿ ಜೂ.14ರಂದು ಬೆಳ್ಳಂಬೆಳಿಗ್ಗೆ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ, ಇಚ್ಲಂಪಾಡಿಯ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಇಚ್ಲಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್ (25ವ.) ಮೃತಪಟ್ಟ ಯುವಕ. ಇವರು ಬೆಂದೂರ್ ವೆಲ್ ನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ರಾತ್ರಿ ಪಾಳಿಯ ಕೆಲಸ ಮುಗಿಸಿ ತನ್ನ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ ವೆಲ್ ನಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Leave a Reply

You May Have Missed

error: Content is protected !!