ಉದನೆ: ಸೈಂಟ್ ಆಂಟನೀಸ್ ಪ್ರೌಢಶಾಲೆ ಸಂಸತ್ತು ಚುನಾವಣೆ

ಉದನೆ: ಸೈಂಟ್ ಆಂಟನೀಸ್ ಪ್ರೌಢಶಾಲೆ ಸಂಸತ್ತು ಚುನಾವಣೆ

ಉದನೆ: ಸೈಂಟ್ ಆಂಟನೀಸ್ ಪ್ರೌಢ ಶಾಲೆ ಇದರ 2023-24 ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ ನಡೆಯಿತು.

ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಉದ್ದೇಶದಿಂದ ಅದೇ ಮಾದರಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಶಾಲಾ ನಾಯಕನಾಗಿ ಆಲ್ವೀನ್, ಉಪನಾಯಕನಾಗಿ ರಕ್ಷಿತ್, ಅಕ್ಷರ ದಾಸೋಹ ಮಂತ್ರಿಯಾಗಿ ವಿನೀದ್, ಸಾಂಸ್ಕೃತಿಕ ಮಂತ್ರಿಯಾಗಿ ಶ್ರಾವ್ಯ, ಕ್ರೀಡಾಮಂತ್ರಿಯಾಗಿ ಚಿತ್ರೇಶ್, ಆರೋಗ್ಯ ಮತ್ತು ಸ್ವಚ್ಛತೆ ಮಂತ್ರಿಯಾಗಿ ಸುದೀಪ್, ವಿಜ್ಞಾನ ಸಂಘ ಮಂತ್ರಿಯಾಗಿ ಪೂಜಾಶ್ರಿ, ಆಯ್ಕೆಯಾದರು.
ಸಮಾಜ ಶಿಕ್ಷಕರಾದ,ಸತ್ಯನಾರಾಯಣ ಗೌಡ ಚುನಾವಣಾ ಮೇಲುಸ್ತುವಾರಿ ವಹಿಸಿದ್ದರು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಹಾಗು ಮುಖ್ಯಗುರು ಶ್ರೀಧರ ಗೌಡ ಉಪಸ್ಥಿತರಿದ್ದರು. ಶಿಕ್ಷಕ, ಶಿಕ್ಷಕೇತರ ವೃಂದ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Leave a Reply

You May Have Missed

error: Content is protected !!