ಪರಿಸರ ದಿನ ಮತ್ತು ವಿಶ್ವ ಮಾದಕ ವಿರೋಧಿ ದಿನಾಚರಣೆ ಕಾರ್ಯಕ್ರಮ

ಪರಿಸರ ದಿನ ಮತ್ತು ವಿಶ್ವ ಮಾದಕ ವಿರೋಧಿ ದಿನಾಚರಣೆ ಕಾರ್ಯಕ್ರಮ

ನೆಲ್ಯಾಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನೆಲ್ಯಾಡಿ ವಲಯದ ವತಿಯಿಂದ ದ. ಕ. ಜಿ. ಹಿ. ಪ್ರಾ. ಶಾಲೆ ಪುಚ್ಚೆರಿಯಲ್ಲಿ ಶಾಲಾ ಪರಿಸರ ಕಾರ್ಯಕ್ರಮ ಮತ್ತು ವಿಶ್ವ ಮಾದಕ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಹಣ್ಣಿನ ಮತ್ತು ಹೂವಿನ ಗಿಡ ನಾಟಿ ಮಾಡಲಾಯಿತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷರಾದ ಜಯಾನಂದ ಬಂಟ್ರಿಯಲು ವಹಿಸಿದರು, ದ. ಕ.ಜಿ ಹಿ.ಪ್ರಾ. ಶಾಲೆ ಪುಚ್ಚೆರಿಯ ಮುಖ್ಯಗುರುಗಳಾದ ಪದ್ಮಾನಾಭ ಪಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮಾದೇರಿ ಒಕ್ಕೂಟದ ಅಧ್ಯಕ್ಷರಾದ ಸಭಾಸ್ಟಿನ್ ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಲತಾ ಮತ್ತು ಜಯಂತಿ, ವಲಯ ಮೇಲ್ವಿಚಾರಕರಾದ ವಿಜೇಶ್, ಜ್ಞಾನ ವಿಕಾಸ ಸಂಯೋಜಕಿ ಯಶ್ವಿನಿ ಮತ್ತು ಸದಸ್ಯರು, ಶಿಕ್ಷಕ ವೃಂದದವರು, ಶಾಲಾ ಮಕ್ಕಳು, ಸೇವಾಪ್ರತಿನಿಧಿಗಳಾದ ಕವಿತಾ, ಅನುಷಾ ಇತರರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!