ದ.ಕ.: ದಾಖಲೆಯ 583 ಮಂದಿಗೆ ಕೋವಿಡ್‌ ದೃಢ

ದ.ಕ.: ದಾಖಲೆಯ 583 ಮಂದಿಗೆ ಕೋವಿಡ್‌ ದೃಢ

ನೇಸರ ಜ.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದಿನದ ವರದಿ ದಿನೇದಿನೆ ಏರುತ್ತಿದ್ದು ಮಂಗಳವಾರ 583 ಮಂದಿಗೆ ಸೋಂಕು ದೃಢಪಟ್ಟಿದೆ.94 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1,872 ಸಕ್ರಿಯ ಪ್ರಕರಣಗಳಿವೆ. ಈವರೆಗೆ 1,705 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಮೆಡಿಕಲ್‌ ವಸತಿ ನಿಲಯದ 10 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಮಂಗಳೂರು ತಾಲೂಕಿನ ವಸತಿ ಸಮುಚ್ಚಯದ 7 ಮಂದಿಯಲ್ಲಿ ಮತ್ತು ಕಾಪ್ರಿಗುಡ್ಡದ ನಿರ್ಮಾಣ ಹಂತದ ಕಾಮಗಾರಿ ಪ್ರದೇಶದಲ್ಲಿ 8 ಮಂದಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸದ್ಯ ಶೇ. 5.73 ಪಾಸಿಟಿವಿಟಿ ದರ ದಾಖಲಾಗಿದೆ.

Leave a Reply

You May Have Missed

error: Content is protected !!