ಲೋಕಾಯುಕ್ತ ಪೊಲೀಸರು​ ದಾಳಿ ಮಾಡುತ್ತಿದ್ದಂತೆ ಲಂಚದ ಹಣವನ್ನೇ ನುಂಗಿದ ಕಂದಾಯ ಅಧಿಕಾರಿ!

ಲೋಕಾಯುಕ್ತ ಪೊಲೀಸರು​ ದಾಳಿ ಮಾಡುತ್ತಿದ್ದಂತೆ ಲಂಚದ ಹಣವನ್ನೇ ನುಂಗಿದ ಕಂದಾಯ ಅಧಿಕಾರಿ!

ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿಯುವ ವೇಳೆ ಕಂದಾಯ ಅಧಿಕಾರಿಯೊಬ್ಬ ಲಂಚದ ಹಣವನ್ನೇ ನುಂಗಿ ನೀರು ಕುಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಕಟ್ನಿಯಲ್ಲಿ ಕಂದಾಯ ಅಧಿಕಾರಿಯಾಗಿರುವ ಪಟ್ವಾರಿ ಗಜೇಂದ್ರ ಸಿಂಗ್ ವ್ಯಕ್ತಿಯೊಬ್ಬರ ಜಮೀನು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ವ್ಯಕ್ತಿಯಿಂದ 5000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಈ ವಿಚಾರವಾಗಿ ವ್ಯಕ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ ಅದರಂತೆ ಸೋಮವಾರ ಕಂದಾಯ ಅಧಿಕಾರಿ ಗಜೇಂದ್ರ ಸಿಂಗ್ ಅವರ ಕಚೇರಿಗೆ ವ್ಯಕ್ತಿ ತೆರಳಿದ್ದಾನೆ ಈ ವೇಳೆ ಅಧಿಕಾರಿಗೆ ಲಂಚದ ಹಣವನ್ನು ಕೈಗೆ ನೀಡಿದ್ದಾನೆ ದುಡ್ಡು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಇದನ್ನು ಕಂಡ ಕಂದಾಯ ಅಧಿಕಾರಿ ಇನ್ನೇನು ತಾನು ಸಿಕ್ಕಿ ಬೀಳುತ್ತೇನೆ ಎನ್ನುವಷ್ಟರಲ್ಲಿ ಕೂಡಲೇ ತನ್ನ ಕೈಯಲ್ಲಿದ್ದ 500 ರೂಗಳ ಹತ್ತು ನೋಟುಗಳನ್ನು ಮುದ್ದೆ ಮಾಡಿ ಬಾಯಿಯೊಳಗೆ ಹಾಕಿ ನೀರು ಕುಡಿದು ಬಿಟ್ಟಿದ್ದಾನೆ.
ಕೂಡಲೇ ಲೋಕಾಯುಕ್ತ ಪೊಲೀಸರ ತಂಡ ಹಣ ನುಂಗಿದ ಅಧಿಕಾರಿಯನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿ ಬಳಿಕ ನುಂಗಿದ ಹಣವನ್ನು ಹೊರತೆಗೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಂದಾಯ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಕಂದಾಯ ಅಧಿಕಾರಿ ಹಣ ನುಂಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Previous post

ವಲಯ ಮಟ್ಟದ ಚೆಸ್ ಪಂದ್ಯಾಟ; ಕಡಬ ಕ್ನಾನಾಯ ಜ್ಯೋತಿ ಶಾಲೆಯ ವಿದ್ಯಾರ್ಥಿಗಳ ವಿಶೇಷ ಸಾಧನೆ

Next post

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಲ್ಲಿ ಬದಲಾವಣೆ- ಇಬ್ಬರು ನಾಯಕರ ಆಯ್ಕೆ-ನಗರ ಬ್ಲಾಕ್ ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ಣ , ಗ್ರಾಮೀಣ ಅಧ್ಯಕ್ಷರಾಗಿ ನಾಗೇಶ್ ಕುಮಾರ್ ಗೌಡ

Leave a Reply

You May Have Missed

error: Content is protected !!