ಪೋಷಕರೇ ಎಚ್ಚರ :ಮೊಬೈಲ್ ಚಾರ್ಜರ್​​ ವೈರ್​ನಿಂದ ವಿದ್ಯುತ್​ ಪ್ರವಹಿಸಿ​ 8 ತಿಂಗಳ ಮಗು ಮೃತ್ಯು

ಪೋಷಕರೇ ಎಚ್ಚರ :ಮೊಬೈಲ್ ಚಾರ್ಜರ್​​ ವೈರ್​ನಿಂದ ವಿದ್ಯುತ್​ ಪ್ರವಹಿಸಿ​ 8 ತಿಂಗಳ ಮಗು ಮೃತ್ಯು

ಮೊಬೈಲ್ ಚಾರ್ಜಿಂಗ್ ವೈರ್ ನಿಂದ ವಿದ್ಯುತ್ ಸ್ಪರ್ಶಗೊಂಡು 8 ತಿಂಗಳ ಕಂದಮ್ಮ ಮೃತಪಟ್ಟ ದುರ್ಘಟನೆ ಕಾರವಾರ ತಾಲೂಕಿನ ಸಿದ್ಧರ ಗ್ರಾಮದಲ್ಲಿ ಬುಧವಾರ ನಡೆದಿದೆ.‌

ಸಿದ್ಧರ ಗ್ರಾಮದ ಸಂತೋಷ ಕಲ್ಗುಟಕರ್ ಹಾಗೂ ಸಂಜನಾ ದಂಪತಿಗಳ ಎಂಟು ತಿಂಗಳ ಮಗುವೇ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಕೊನೆಯುಸಿರೆಳೆದಿದೆ.

ಪೋಷಕರು ಮೊಬೈಲ್ ಚಾಜ್೯ ಹಾಕಿ ಆಫ್ ಮಾಡದೆ ಬಿಟ್ಟಿದ್ದರು ಎನ್ನಲಾಗಿದೆ. ಮಗು ಆಟವಾಡುತ್ತಾ ಮೊಬೈಲ್ ಚಾಜ್೯ರ್ ವೈರ್ ಅನ್ನು ಬಾಯಲ್ಲಿಟ್ಟುಕೊಂಡಿದೆ ಕಾರಣ ಈ ಘಟನೆ ನಡೆದು ಹೋಗಿದೆ. ಆಸ್ಪತ್ರೆಗೆ ಮಗುವನ್ನು ಕರೆತಂದರಾದರೂ, ವೈದ್ಯರ ಪ್ರಯತ್ನ ಯಶ ಕಾಣಲಿಲ್ಲ.
ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!