ನಟಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಭಾವುಕ ಪತ್ರ ಬರೆದ ಆರೋಪಿ ಸುಕೇಶ್

ನಟಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಭಾವುಕ ಪತ್ರ ಬರೆದ ಆರೋಪಿ ಸುಕೇಶ್

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇವತ್ತು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟು ಹಬ್ಬಕ್ಕೆ ಬಹುಕೋಟಿ ವಂಚಕ ಆರೋಪಿ ಹಾಗೂ ಜಾಕ್ವೆಲಿನ್ ಬಾಯ್ ಫ್ರೆಂಡ್ ಆಗಿದ್ದ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಪತ್ರವೊಂದನ್ನು ಬರೆದಿದ್ದಾನೆ. ಕೈ ಬರಹದಿಂದಲೇ ಪತ್ರ ರೆಡಿಯಾಗಿದ್ದು, ಅತೀ ಶೀಘ್ರದಲ್ಲೇ ಬರುವುದಾಗಿ ತಿಳಿಸಿದ್ದಾನೆ.

ವಂಚನೆಯ ಕಾರಣದಿಂದಾಗಿ ಸದ್ಯ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಆಗಾಗ್ಗೆ ಜಾಕ್ವೆಲಿನ್ ಗೆ ಪತ್ರಗಳನ್ನು ಬರೆಯುತ್ತಲೇ ಇದ್ದಾನೆ. ಇನ್ನೂ ಜಾಕ್ವೆಲಿನ್ ಮೇಲೆ ಪ್ರೀತಿ ಉಳಿಸಿಕೊಂಡಿರುವ ವಿಚಾರವನ್ನೂ ಅವನು ಹಂಚಿಕೊಂಡಿದ್ದಾನೆ. ಇಂದು ಕೂಡ ಜೈಲಿನಿಂದಲೇ ಒಂದು ಪತ್ರವನ್ನು ಬರೆದಿದ್ದಾನೆ. ಶೀಘ್ರದಲ್ಲೇ ಕಷ್ಟಗಳು ಕರಗಿ, ಮತ್ತೆ ನಾನು ಆಚೆ ಬರುವೆ. ಮುಂದಿನ ಸಲ ಮತ್ತೆ ಒಟ್ಟಿಗೆ ಹುಟ್ಟು ಹಬ್ಬ ಆಚರಿಸೋಣ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

Leave a Reply

You May Have Missed

error: Content is protected !!