ನೆಲ್ಯಾಡಿ: ಕೃಷಿಗೆ ಕಾಡಾನೆ ದಾಳಿ; ರಸ್ತೆ ಸಂಚಾರಕ್ಕೆ ತಡೆ

ನೆಲ್ಯಾಡಿ: ಕೃಷಿಗೆ ಕಾಡಾನೆ ದಾಳಿ; ರಸ್ತೆ ಸಂಚಾರಕ್ಕೆ ತಡೆ

ನೆಲ್ಯಾಡಿ ಗ್ರಾಮದ ಚಾಕೋಟೆಯ ಮೋಳಿ ಸೈಮನ್, ಸಂತೋಷ್ ಹಾಗೂ ಜೋಸೆಫ್ ಎಂಬವರ ತೋಟಕ್ಕೆ ಆದಿತ್ಯವಾರ ತಡ ರಾತ್ರಿ ಕಾಡಾನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಬಾಳೆ ಕೃಷಿಗೆ ಹಾನಿ ಉಂಟಾಗಿದೆ ಹಾಗೂ ರಸ್ತೆಯಲ್ಲಿರುವ ತಾಳೆ ಮರಗಳನ್ನು ಉರುಳಿಸಿ ಸಂಚಾರಕ್ಕೆ ತಡೆ ಉಂಟು ಮಾಡಿರುತ್ತದೆ.
ಕೃಷಿಕರು ಭಯಭೀತರಾಗಿದ್ದು, ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆಯವರು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

You May Have Missed

error: Content is protected !!