ಕೊಕ್ಕಡ: SKSSF ಬದ್ರಿಯಾ ನಗರ ಬೋಳದ ಬೈಲ್ ವತಿಯಿಂದ ಸ್ವಾತಂತ್ರ್ಯೋತ್ಸವ

ಕೊಕ್ಕಡ: SKSSF ಬದ್ರಿಯಾ ನಗರ ಬೋಳದ ಬೈಲ್ ವತಿಯಿಂದ ಸ್ವಾತಂತ್ರ್ಯೋತ್ಸವ

ಕೊಕ್ಕಡ: SKSSF ಬದ್ರಿಯಾ ನಗರ ಬೋಲದ ಬೈಲು ಶಾಖೆ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ದ್ವಜಾರೋಹಣ ನಡೆಯಿತು.
ಸ್ಥಳೀಯ ಮಸೀದಿಯ ಧರ್ಮಗುರುಗಳಾದ ಮುಸ್ತಫ ಪೈಝಿ ಕರಾಯರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಬೋಳದ ಬೈಲ್ ಶಾಖೆ ಅಧ್ಯಕ್ಷರಾದ ಅಶ್ರಫ್ ಬಿ.ಕೆ ವಹಿಸಿದ್ದರು. ಡಾ.ಗಣೇಶ್ ಅಂಬಿಕಾ ಕ್ಲಿನಿಕ್ ಕೊಕ್ಕಡ ರವರು ಧ್ವಜಾರೋಹಣವನ್ನು ನೆರವೇರಿಸಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಥಳೀಯ ಚರ್ಚಿನ ಧರ್ಮ ಗುರುಗಳಾದ ಹರಿಪ್ರಸಾದ್ ಆರ್ ವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಕುರಿತು ಮಾತನಾಡಿದರು.ಜಾನ್ ಕುವೆಲ್ಲೋ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಪಟ್ಲಡ್ಕ ಸ್ಥಳೀಯ ಮಸೀದಿಯ ಮುಖ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಬೋಳದ ಬೈಲ್, ಅಬ್ದುಲ್ಲಾ ಕೊಟ್ರಸ್, ಯೂಸುಫ್ ಹಾಜಿ ಬೋಳದ ಬೈಲು, ಹಾಗೂ SKSSF ನ ಸಕ್ರಿಯ ಕಾರ್ಯಕರ್ತರು ಊರಿನ ಗಣ್ಯರು ತನ್ವೀರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ರಾಷ್ಟ್ರಗೀತೆ, ಆಲಾಪನೆ ನಡೆಯಿತು. ಸ್ವಾತಂತ್ರ್ಯೋತ್ಸವದ ಭಾಗವಾಗಿ ನಡೆಸಿದ ಬಾವುಟ ಧ್ವಜ ಕೊಲಾಜ್ ಮತ್ತು ದೇಶಭಕ್ತಿ ಗೀತೆ ಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.


Leave a Reply

You May Have Missed

error: Content is protected !!