ಧ್ವಜಾರೋಹಣ ವೇಳೆ ಶೂ ಹಾಕಿದ್ದಕ್ಕೆ ಟ್ರೋಲಾದ ನಟಿ ಶಿಲ್ಪಾ ಶೆಟ್ಟಿ..!!

ಬಿಟೌನ್ ನಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುವ ನಟಿ ಶಿಲ್ಪಾ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ದಿನ ಧ್ವಜಾರೋಹಣ ಮಾಡಿದ್ದಾರೆ. ಈ ಮೂಲಕ ದೇಶ ಪ್ರೇಮವನ್ನು ಮರೆದಿದ್ದಾರೆ. ಆದರೆ ಇದೇ ವಿಚಾರವಾಗಿ ಅವರು ಟ್ರೋಲ್ ಆಗಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ತನ್ನ ಕುಟುಂಬದೊಂದಿಗೆ 77ನೇ ಸ್ವಾತಂತ್ರ್ಯ ದಿನವನ್ನು ಧ್ವಜಾರೋಹಣನ್ನು ನೆರವೇರಿಸುವ ಮೂಲಕ ಸಂಭ್ರಮಿಸಿದ್ದಾರೆ. ಆದರೆ ಧ್ವಜಾರೋಹಣ ಮಾಡಿದ ವೇಳೆ ಅವರು ಶೂಗಳನ್ನು ಹಾಕಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ.
ಧ್ವಜಾರೋಹಣವನ್ನು ನೆರವೇರಿಸುವ ವಿಡಿಯೋವನ್ನು ಶಿಲ್ಪಾ ಶೆಟ್ಟಿ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ. ಈ ವೇಳೆ ಹಾಕಿರುವ ಶೂಗಳನ್ನು ನೋಡಿ ಕೆಲವರು ಅವರನ್ನು ಟ್ರೋಲ್ ಮಾಡಿದ್ದಾರೆ.
ನೀವು ರಾಷ್ಟ್ರಧ್ವಜವನ್ನು ಹಾರಿಸುವಾಗ, ನಿಮ್ಮ ಪಾದರಕ್ಷೆಗಳನ್ನು ತೆಗೆದ ನಂತರವೇ ಧ್ವಜದ ಹಗ್ಗವನ್ನು ಸ್ಪರ್ಶಿಸಿ ಎಂದು ನಾನು ನಿಮ್ಮನ್ನು ಆಗ್ರಹಿಸುತ್ತೇನೆ” ಎನ್ನುವ ಕಮೆಂಟನ್ನು ನೆಟ್ಟಗರೊಬ್ಬರು ಮಾಡಿದ್ದಾರೆ. “ರಾಷ್ಟ್ರ ಧ್ವಜವನ್ನು ಹಾರಿಸುವಾಗ ಚಪ್ಪಲಿಗಳನ್ನು ತೆಗೆಯಬೇಕೆನ್ನುವುದು ಕೂಡ ನಿಮಗೆ ಗೊತ್ತಿಲ್ಲ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಶಿಲ್ಪಾ ಶೆಟ್ಟಿ ಯಾವ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಈ ಬಾರಿ ಅವರು ಖಡಕ್ ಆಗಿ ಟ್ರೋಲರ್ ಗಳಿಗೆ ಪ್ರತಿಕ್ರಿಯೆ ನೀಡಿರುವುದು ವೈರಲ್ ಆಗಿದೆ.
“ಧ್ವಜಾರೋಹಣ ಮಾಡುವಾಗ ಇರುವ ನಿಯಮಗಳ ಬಗ್ಗೆ ನನಗೆ ತಿಳಿದಿದೆ, ನನ್ನ ದೇಶ ಮತ್ತು ಧ್ವಜದ ಗೌರವವು ನನ್ನ ಹೃದಯದಿಂದ ಬಂದಿದೆಯೇ ಹೊರತು ಪ್ರಶ್ನಿಸಲು ಅಲ್ಲ. ನಾನೊಬ್ಬ ಹೆಮ್ಮೆಯ ಭಾರತೀಯಳು. ಇಂದಿನ ಪೋಸ್ಟ್ ನ್ನು ದೇಶದ ಬಗೆಗಿನ ಭಾವನೆಯನ್ನು ಹಂಚಿಕೊಳ್ಳಲು ಮತ್ತು ಆಚರಿಸಲು ಹಾಕಿದ್ದೇನೆ. ಎಲ್ಲಾ ಟ್ರೋಲರ್‌ಗಳಿಗೆ (ನಾನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇನೆ) ಈ ದಿನ ನಿಮ್ಮ ಅಜ್ಞಾನ ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ” ಎಂದಿದ್ದಾರೆ.
ಇಷ್ಟು ಮಾತ್ರವಲ್ಲದೆ ಗೂಗಲ್ ನಲ್ಲಿ ನಾವು ಭಾರತದ ಧ್ವಜವನ್ನು ಹಾರಿಸುವಾಗ ಶೂಗಳೊಂದಿಗೆ ಹಾರಿಸಬಹುದೇ?ಎನ್ನುವ ಪ್ರಶ್ನೆಯನ್ನು ಹಾಕಿ ಅದಕ್ಕೆ ಬಂದ ಪ್ರತಿಕ್ರಿಯೆಯನ್ನು ಸ್ಕ್ರೀನ್ ಶಾಟ್ ಮಾಡಿ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಭಾರತದ ಧ್ವಜ ಸಂಹಿತೆಯು ಬೂಟುಗಳೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ನಿರ್ಬಂಧಿಸುವುದಿಲ್ಲ ಎಂದು ಪ್ರಶ್ನೆಗೆ ಬಂದ ಉತ್ತರವಾಗಿತ್ತು. ಇದು ಫ್ಯಾಕ್ಟ್ ಎಂದು ನಟಿ ಬರೆದುಕೊಂಡಿದ್ದಾರೆ.
🖕🖕ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🖕🖕
NESARA|| WhatsApp ||GROUPS |
|---|
💢ಜಾಹೀರಾತು💢























Leave a Reply