ಗೋಳಿತ್ತೊಟ್ಟು: ಕೃಷಿಕ ಮೋಹನ ಗೌಡ ಹೃದಯಾಘಾತದಿಂದ ನಿಧನ

ಗೋಳಿತ್ತೊಟ್ಟು: ಕೃಷಿಕ ಮೋಹನ ಗೌಡ ಹೃದಯಾಘಾತದಿಂದ ನಿಧನ

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಪಟೇರಿ ದಿ.ನೋಣಯ್ಯ ಗೌಡರವರ ಪುತ್ರ ಕೃಷಿಕ ಮೋಹನ ಗೌಡ(47ವ.)ರವರು ಹೃದಯಾಘಾತದಿಂದ ಆ.20ರಂದು ತಡರಾತ್ರಿ ನಿಧನರಾದರು.

ರಾತ್ರಿ ಸುಮಾರು 11 ಗಂಟೆ ವೇಳೆಗೆ ಮೋಹನ ಗೌಡರವರಿಗೆ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದರು. ಆದರೆ ಆ ವೇಳೆಗೆ ಮೋಹನ ಗೌಡರವರು ನಿಧನರಾಗಿದ್ದರು ಎಂದು ವರದಿಯಾಗಿದೆ.

ಮೃತರು ತಾಯಿ ನಿರ್ಮಲಾ, ಪತ್ನಿ ದಮಯಂತಿ, ಪುತ್ರ ಯಶ್ವಿತ್, ಪುತ್ರಿ ಖುಷಿ, ಸಹೋದರರಾದ ಗೋಳಿತ್ತೊಟ್ಟು ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ, ವೆಂಕಟ್ರಮಣ, ರಾಜೇಶ್ ಹಾಗೂ ಸಹೋದರಿ ವೇದಾವತಿ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave a Reply

You May Have Missed

error: Content is protected !!