ಗೋಳಿತ್ತೂಟ್ಟು ಸ ಉ ಹಿ ಪ್ರಾ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಗೋಳಿತ್ತೂಟ್ಟು ಸ ಉ ಹಿ ಪ್ರಾ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಗೋಳಿತ್ತೂಟ್ಟು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ಕಡಬದ ವತಿಯಿಂದ ಗೋಳಿತ್ತೂಟ್ಟು ಸ ಉ ಹಿ ಪ್ರಾ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಗಿಡನಾಟಿ ಕಾರ್ಯಕ್ರಮ.

ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡುವುದರೊಂದಿಗೆ, ವಿದ್ಯಾರ್ಥಿಗಳಿಗೆ ಗಿಡ ವಿತರಿಸಿ, ಶಾಲೆಯ ಪರಿಸರದಲ್ಲಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.

ಕಡಬ ತಾಲೂಕು ಕೃಷಿ ಮೇಲ್ವಿಚಾರಕ ಸೋಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಬಿ ಎಂ ಉದ್ಘಾಟಿಸಿದರು. ಶಿಕ್ಷಕಿ ಶ್ರೀಮತಿ ತೇಜಸ್ವಿ ಕೆ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಗೋಳಿತ್ತೂಟ್ಟು ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಬಾಲಕೃಷ್ಣ ಅಲೆಕ್ಕಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋಪಾಲ ಗೌಡ ಉಪಸ್ಥಿತರಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಸುಜಾತ ಸ್ವಾಗತಿಸಿದರು. ಸೇವಾನಿರತರಾದ ನೇಮಿರಾಜ ಕಲಾಯಿ ಕೃತಜ್ಞತೆ ಸಲ್ಲಿಸಿದರು. ಯೋಜನೆಯ ವತಿಯಿಂದ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ನೀಡಿದರು. ಶಿಕ್ಷಕ ಅಬ್ದುಲ್ ಲತೀಫ್ ಕಾರ್ಯಕ್ರಮ ನಿರೂಪಿಸಿದರು. ದೈ.ಶಿ.ಶಿಕ್ಷಕ ಜಾನ್ ಕೆ.ಪಿ ಮತ್ತು ಗೌರವ ಶಿಕ್ಷಕಿ ಯಶಸ್ವಿನಿ ಜಿ.ಕೆ ಸಹಕರಿಸಿದರು

 

Previous post

ಕಡಬ: Chandrayaan-3 ಯಶಸ್ಸಿಗೆ ಕೈ ಜೋಡಿಸಿದ ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜಿನ 2009ರ ಪಿಯುಸಿ ಬ್ಯಾಚ್ ನ ವಿದ್ಯಾರ್ಥಿ ಲೋಹಿತ್

Next post

ಮಾಧ್ಯಮಗಳಿಗೆ ಕ್ಷಮೆ ಕೇಳಿ ಪತ್ರ ಬರೆದ ದರ್ಶನ್: ಮಾಧ್ಯಮ ನಡುವಿನ ವಿವಾದಕ್ಕೆ ಕಾರಣವೇನು?

Leave a Reply

You May Have Missed

error: Content is protected !!