ಪ್ರಿಯತಮೆಯೊಂದಿಗೆ 10 ನಿಮಿಷ ಲಿಪ್‌ ಲಾಕ್‌ ಕಿಸ್‌ ಮಾಡಿ ಕಿವಿಯ ತಮಟೆಯನ್ನೇ ಹರಿದುಕೊಂಡ ಪ್ರಿಯಕರ.!

ಪ್ರಿಯತಮೆಯೊಂದಿಗೆ 10 ನಿಮಿಷ ಲಿಪ್‌ ಲಾಕ್‌ ಕಿಸ್‌ ಮಾಡಿ ಕಿವಿಯ ತಮಟೆಯನ್ನೇ ಹರಿದುಕೊಂಡ ಪ್ರಿಯಕರ.!

ಪ್ರೀತಿಯಲ್ಲಿ ಇರುವಾಗ ರೊಮ್ಯಾನ್ಸ್‌ ಅನ್ನೋದು ಸಾಮಾನ್ಯ. ಆದರೆ ಅದೇ ರೊಮ್ಯಾನ್ಸ್‌ ನಮ್ಮ ಜೀವದ ಯಾವುದೋ ಒಂದು ಅಂಗಕ್ಕೆ ಹಾನಿ ಮಾಡಿದರೆ ಏನಾಗಬಹುದು?

ಕೇಳೋಕೆ ವಿಚಿತ್ರವಾದರೂ ಇಂಥದ್ದೊಂದು ಘಟನೆ ಚೀನಾದಲ್ಲಿ ನಡೆದಿದೆ. ಪ್ರಿಯತಮೆ ಜೊತೆಗೆ ಲಿಪ್‌ ಲಾಕ್‌ ಕಿಸ್‌ ನ್ನು ಮಾಡಿ ವ್ಯಕ್ತಿಯೊಬ್ಬ ಕಿವಿಯ ತಮಟೆಗೆ ಹಾನಿ ಮಾಡಿಕೊಂಡಿದ್ದಾನೆ.
ಆಗಸ್ಟ್ 22 ರಂದು ಈ ಘಟನೆ ನಡೆದಿದ್ದು, ಆ ದಿನವನ್ನು ಚೀನಾದಲ್ಲಿ ಚೈನೀಸ್ ಪ್ರೇಮಿಗಳ ದಿನವಾಗಿ ಆಚರಿಸಿಕೊಳ್ಳಲಾಗುತ್ತದೆ. ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದ ಪಶ್ಚಿಮ ಸರೋವರದಲ್ಲಿ ಜೋಡಿಯೊಂದು ಪ್ರೇಮ – ಪ್ರಣಯದಲ್ಲಿ ಕಾಲ ಕಳೆದಿದೆ. ಈ ವೇಳೆ ಇಬ್ಬರು 10 ನಿಮಿಷಗಳ ಲಿಪ್‌ ಲಾಕ್‌ ಕಿಸ್‌ ನ್ನು ಮಾಡಿದ್ದಾರೆ.

ಇದಾದ ಬಳಿಕ ಪ್ರಿಯಕರ ತನ್ನ ಎಡ ಕಿವಿ ಸರಿಯಾಗಿ ಕೇಳಿಸದೆ ಇರುವುದರಿಂದ ಹಾಗೂ ಕಿವಿಯಲ್ಲಿ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಪರೀಕ್ಷೆ ಮಾಡಿಸಲು ತೆರಳಿದ್ದಾನೆ. ವೈದ್ಯರು ಪರೀಕ್ಷೆ ಮಾಡಿ ವ್ಯಕ್ತಿಯ ಕಿವಿಯ ತಮಟೆ ಹರಿದು ಹೋಗಿರುವುದು ಪತ್ತೆ ಮಾಡಿದ್ದಾರೆ. ಈ ಸಮಸ್ಯೆ ಸರಿಯಾಗಲು ಕನಿಷ್ಠ 2 ತಿಂಗಳು ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಉದ್ರೇಕ್ತದಿಂದ ಕಿಸ್‌ ಮಾಡಿ, ಜೋರಾಗಿ ಉಸಿರಾಡಿದರಿಂದ ಒತ್ತಡ ಹೆಚ್ಚಾಗಿ ಕಿವಿಗೆ ಇದು ಪರಿಣಾಮ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ.

Leave a Reply

You May Have Missed

error: Content is protected !!