ಇಚ್ಲಂಪಾಡಿ: ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ

ಇಚ್ಲಂಪಾಡಿ: ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಅಲೆಕ್ಕಿ ನಿವಾಸಿ ಬಾಲಕೃಷ್ಣ ಗೌಡ(51ವ.)ರವರು ಆ.30ರಂದು ಮಧ್ಯಾಹ್ನದ ವೇಳೆಗೆ ತನ್ನ ಮನೆಯಲ್ಲಿ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಲಕೃಷ್ಣ ಗೌಡ ಅವರು ಸುಮಾರು 22 ವರ್ಷ ಪುತ್ತೂರಿನ ಅಭಿಮಾನ್ ಬಾರ್ ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡಿದ್ದು ಇತ್ತೀಚಿನ 2 ವರ್ಷದಿಂದ ಪುತ್ತೂರಿನ ನಿರಾಲಾ ಬಾರ್ ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ 1 ತಿಂಗಳ ಹಿಂದೆ ಕೆಲಸಕ್ಕೆ ರಜೆ ಹಾಕಿ ಮನೆಗೆ ಬಂದಿದ್ದರು. ಆ.30ರಂದು ಮಧ್ಯಾಹ್ನದ ವೇಳೆಗೆ ಬಾಲಕೃಷ್ಣ ಗೌಡರವರ ಪತ್ನಿ ಹಾಗೂ ಹಿರಿಯ ಮಗ ನೆಲ್ಯಾಡಿಗೆ ಔಷಧಿಗೆಂದು ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಇನ್ನೋರ್ವ ಪುತ್ರ ಶಾಲೆಗೆ ಹೋಗಿದ್ದರು. ನೆಲ್ಯಾಡಿಗೆ ಹೋಗಿದ್ದ ಪತ್ನಿ ಹಾಗೂ ಮಗ ಮನೆಗೆ ಬಂದ ವೇಳೆ ಬಾಲಕೃಷ್ಣ ಗೌಡರವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಶಶಿಪ್ರಭಾ, ಪುತ್ರರಾದ ಯಶ್ವಿನ್, ಶ್ರೇಯಸ್, ಸಹೋದರ ತ್ಯಾಂಪಣ್ಣ ಗೌಡ, ಕೇಶವ ಗೌಡ ಹಾಗೂ 6 ಮಂದಿ ಸಹೋದರಿಯರನ್ನು ಅಗಲಿದ್ದಾರೆ.

Previous post

ಗಂಡಿಬಾಗಿಲು ಸಿಯೋನ್ ಆಶ್ರಮ; ಓಣಂ ಹಬ್ಬ ಆಚರಣೆ

Next post

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ 2023 -24ನೇ ಅವಧಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾ ಸಂಸ್ಥೆಯ ಪರಿಚಯ ಕಾರ್ಯಕ್ರಮ

Leave a Reply

You May Have Missed

error: Content is protected !!