ನೆಲ್ಯಾಡಿ: ಭಾರತೀಯ ಭೂಸೇನಾ ಯೋಧ ಶ್ರೀಜಿತ್ ಸೇವಾ ನಿವೃತ್ತಿ

ನೆಲ್ಯಾಡಿ: ಭಾರತೀಯ ಭೂಸೇನಾ ಯೋಧ ಶ್ರೀಜಿತ್ ಸೇವಾ ನಿವೃತ್ತಿ

ನೆಲ್ಯಾಡಿ: ಭಾರತೀಯ ಭೂಸೇನಾ ಯೋಧ ಶ್ರೀಜಿತ್ ಅವರು ಆ.31ರಂದು ಸೇವೆಯಿಂದ ನಿವೃತ್ತಿಯಾದರು. ಭಾರತೀಯ ಭೂಸೇನೆ ಯಲ್ಲಿ ಇವರು 21 ವರ್ಷ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ.
ಭಾರತೀಯ ಭೂ ಸೇನೆಗೆ 2002ರಲ್ಲಿ ಜಮ್ಮುವಿನಲ್ಲಿ ಸೇನೆಗೆ ಸೇರ್ಪಡೆಗೊಂಡು ಆ ಬಳಿಕ ಕೊಲ್ಕತ್ತಾ, ತ್ರಿಪುರ, ದೆಹಲಿ, ಛತ್ತೀಸ್ ಘಡ, ರಾಜಸ್ಥಾನದಲ್ಲಿ ಸೇವೆ ಇವರು ಸೇವೆ ಸಲ್ಲಿಸಿದ್ದಾರೆ. ಈ ಮಧ್ಯೆ ದೆಹಲಿಯಲ್ಲಿ ಎನ್ ಎಸ್ ಜಿ ಕಮಾಂಡೋ ಪಡೆಯಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದರು.
ಮೂಲತಃ ಇವರು ಹಾಸನ ನಿವಾಸಿ ದಿ.ಸುರೇಂದ್ರನ್ ಹಾಗೂ ವಿಲಾಸಿನಿ ದಂಪತಿ ಪುತ್ರ. ಪ್ರಸ್ತುತ ನೆಲ್ಯಾಡಿ ಗ್ರಾಮದ ಪಡ್ಡಡ್ಕ ನಿವಾಸಿಯಾಗಿದ್ದು ಇವರ ಪತ್ನಿ ಮಂಜುಳಾ ಎಂ.ಎಸ್ ಅವರು ಕೌಕ್ರಾಡಿ ಗ್ರಾಮ ಪಂಚಾಯಿತಿ ಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದಾರೆ. ಪುತ್ರಿ ವರ್ಣಿಕ ನೆಲ್ಯಾಡಿ ಬೆಥನಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರುಗಳೊಂದಿಗೆ ನಿವೃತ್ತ ಜೀವನ ನಡೆಸಲಿದ್ದಾರೆ.

Leave a Reply

You May Have Missed

error: Content is protected !!