ನೆಲ್ಯಾಡಿ : ಶ್ರೀರಾಮ ವಿದ್ಯಾಲಯ ಸೂರ್ಯ ನಗರ; ನೂತನ ತರಗತಿ ಕೊಠಡಿಗಳ ಲೋಕಾರ್ಪಣೆ; ಆಂಗ್ಲ ಮಾಧ್ಯಮ ತರಗತಿಯ ಆರಂಭೋತ್ಸವ

ನೆಲ್ಯಾಡಿ : ಶ್ರೀರಾಮ ವಿದ್ಯಾಲಯ ಸೂರ್ಯ ನಗರ; ನೂತನ ತರಗತಿ ಕೊಠಡಿಗಳ ಲೋಕಾರ್ಪಣೆ; ಆಂಗ್ಲ ಮಾಧ್ಯಮ ತರಗತಿಯ ಆರಂಭೋತ್ಸವ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರ ನೂತನ ತರಗತಿ ಕೊಠಡಿಗಳ ಲೋಕಾರ್ಪಣೆ, ಆಂಗ್ಲ ಮಾಧ್ಯಮ ತರಗತಿಯ ಆರಂಭೋತ್ಸವ ಕಾರ್ಯಕ್ರಮ ಸೆ.12ರಂದು ನೆರವೇರಿತು.

ನೂತನ ತರಗತಿ ಕೊಠಡಿಗಳ ಲೋಕಾರ್ಪಣೆ ಹಾಗೂ ಆಂಗ್ಲ ಮಾಧ್ಯಮ ತರಗತಿಯ ಆರಂಭೋತ್ಸವ ವನ್ನು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕು. ಕುಮಾರಿ ಭಾಗೀರಥಿ ಮುರುಳ್ಯ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಕೃಷ್ಣ ಶೆಟ್ಟಿ ಕಡಬ, ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಮುರಳಿಧರ, ಕಾರ್ಯದರ್ಶಿ ಮೂಲಚಂದ್ರ ಉಪಸ್ಥಿತರಿದ್ದರು.

ಡಾ. ಮುರಳಿಧರ ಸ್ವಾಗತಿಸಿದರು, ಮೂಲಚಂದ್ರ ವಂದಿಸಿದರು, ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!