ಜೇಸಿಐ ಇಂಡಿಯ ವಲಯ 15 ರ “ZONE 2022” ವಲಯಾಧಿಕಾರಿಗಳ ತರಬೇತಿ ಕಮ್ಮಟ

ಜೇಸಿಐ ಇಂಡಿಯ ವಲಯ 15 ರ “ZONE 2022” ವಲಯಾಧಿಕಾರಿಗಳ ತರಬೇತಿ ಕಮ್ಮಟ

ನೇಸರ ಜ.26: ಜೇಸಿಐ ಕಾರ್ಕಳ ಗ್ರಾಮೀಣದ ಆತಿಥ್ಯದಲ್ಲಿ ಜೇಸಿಐ ವಲಯ 15ರ ವಲಯಾಧಿಕಾರಿಗಳ ತರಬೇತಿ ಕಮ್ಮಟವು ಕಾರ್ಕಳದ ಹೋಟೆಲ್ ಕಟೀಲ್ ಇಂಟರ್ನ್ಯಾಷನಲ್ ನಲ್ಲಿ ನಡೆಯಿತು.

ತರಬೇತಿ ಕಮ್ಮಟ ಕಾರ್ಯಕ್ರಮವನ್ನು ವಲಯಾಧ್ಯಕ್ಷ ಜೇಸಿ.ಸೆನೆಟರ್ ರೋಯನ್ ಉದಯ ಕ್ರಾಸ್ತ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಪೂರ್ವ ವಲಯಾಧ್ಯಕ್ಷರಾದ ಜೇಸಿ.ಉದಯಕುಮಾರ್ ಶೆಟ್ಟಿ ಇನ್ನಾ ಭಾಗವಹಿಸಿ,ಆಯ್ಕೆಯಾದ ವಲಯಾಧಿಕಾರಿಗಳು ಅವರಿಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದರ ಮೂಲಕ,ನಮ್ಮ ಹುದ್ದೆಗೆ ನ್ಯಾಯ ತುಂಬುವ ಕೆಲಸವನ್ನು ಮಾಡಬೇಕು,ಯಾರನ್ನೂ ಅನುಕರಣೆ ಮಾಡದೆ ತನ್ನ ತನದಿಂದ ಹೊಸತನ್ನು ಅಳವಡಿಸುವ ಮೂಲಕ ಕೆಲಸ ನಿರ್ವಹಿಸಿ ಎಂದು ಮಾರ್ಗದರ್ಶನ ನೀಡಿದರು.

ಸಭಾಧ್ಯಕ್ಷತೆಯನ್ನು ವಲಯ ಆಡಳಿತ ಮಂಡಳಿಯ ನಿರ್ದೇಶಕ ಜೆ.ಎಫ್.ಡಿ.ಪುರುಷೋತ್ತಮ ಶೆಟ್ಟಿ ಅವರು ವಹಿಸಿದರು.ಮುಖ್ಯ ತರಬೇತುದಾರರಾಗಿ ಜೇಸಿಐ ಇಂಡಿಯದ ಪೂರ್ವ ಉಪಾಧ್ಯಕ್ಷರಾದ ಜೇಸಿ.ಸೆನೆಟರ್ ಸದಾನಂದ ನಾವಡರವರು.ಹಾಗೂ ಸಹ ತರಬೇತುದಾರರಾಗಿ ಜೇಸಿಐ ಇಂಡಿಯದ ಪೂರ್ವ ಉಪಾಧ್ಯಕ್ಷ ಜೇಸಿ.ಸೆನೆಟರ್ ಸಂದೀಪ್ ಕುಮಾರ್ ಹಾಗೂ ವಲಯಾಧ್ಯಕ್ಷ ಜೇಸಿ.ಪಿಪಿಪಿ.ರಾಕೇಶ್ ಕುಂಜೂರುರವರು ಭಾಗವಹಿಸಿದ್ದರು. ಜೇಸಿಐ ಕಾರ್ಕಳ ಗ್ರಾಮೀಣದ ಅಧ್ಯಕ್ಷರಾದ ಜೇಸಿ.ಸುಚಿತ್ ಶೆಟ್ಟಿಯವರು ಸ್ವಾಗತಿಸಿದರು.ಜೇಸಿ.ಸದಾಶಿವ ನಕ್ರೆ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಜೇಸಿ.ಪ್ರಾರ್ಥನಾ.ಕೆ.ಪಿ ಜೇಸಿ ವಾಣಿಯನ್ನು ಉದ್ಘೋಷಿಸಿದರು. ಜೇಸಿ.ಹರಿಣಿ,ಜೇಸಿ ಶಿವಾನಿ,ಜೇ ಬಂಗೇರಯವರು ಅತಿಥಿಗಳನ್ನು ಪರಿಚಯಿಸಿದರು. ಜೇಸಿ.ಪ್ರಕಾಶ್.ಕೆ ಧನ್ಯವಾದವಿತ್ತರು. ನಿಕಟಪೂರ್ವ ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ಸೌಜನ್ಯ ಹೆಗ್ದೆ, ಜೇಸಿಐ ಕಾರ್ಕಳ ಗ್ರಾಮೀಣದ ಅಧ್ಯಕ್ಷ ಜೇಸಿ.ಮೋಹನ ನಕ್ರೆ ಉಪಸ್ಥಿತರಿದ್ದರು.

ವಲಯದ ವಲಯಾಧಿಕಾರಿಗಳು ತರಬೇತಿಯಲ್ಲಿ ಹಾಜರಿದ್ದರು,ಮೂರು ಹಂತಗಳಲ್ಲಿ ತರಬೇತುದಾರರು ತರಬೇತಿಯನ್ನು ನಡೆಸಿಕೊಟ್ಟರು.

Previous post

73 ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಕಡಬ ತಹಶೀಲ್ದಾರ್ ಅನಂತ ಶಂಕರ್ ರಿಂದ ಧ್ವಜಾರೋಹಣ||ಠಾಣಾ ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಸಿಬ್ಬಂದಿಗಳಿಂದ ಕವಾಯತು

Next post

ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಆಲಂಕಾರು ಮತ್ತು ಲಯನ್ಸ್ ಕ್ಲಬ್ ಆಲಂಕಾರು ಇದರ ಜಂಟಿ ಆಶ್ರಯದಲ್ಲಿ ಗಣರಾಜ್ಯೋತ್ಸವ

Leave a Reply

You May Have Missed

error: Content is protected !!