ಮನೆಗೆ ಹೋದ್ರೆ ಅಮ್ಮ ಸ್ನಾನ ಮಾಡಿಸ್ತಾಳೆ ಎಂದು ಕಾರಿನಲ್ಲಿ ಹೋಗಿ ಅಡಗಿ ಕುಳಿತ ಬಾಲಕ, ಉಸಿರುಗಟ್ಟಿ ಸಾವು

ಮನೆಗೆ ಹೋದ್ರೆ ಅಮ್ಮ ಸ್ನಾನ ಮಾಡಿಸ್ತಾಳೆ ಎಂದು ಕಾರಿನಲ್ಲಿ ಹೋಗಿ ಅಡಗಿ ಕುಳಿತ ಬಾಲಕ, ಉಸಿರುಗಟ್ಟಿ ಸಾವು

ಮನೆಗೆ ಹೋದ್ರೆ ತಾಯಿ ಸ್ನಾನ ಮಾಡಿಸ್ತಾಳೆ ಎಂದು ನಿಲ್ಲಿಸಿದ್ದ ಕಾರಿನಲ್ಲಿ ಅಡಗಿ ಕುಳಿತ 5 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುಜರಾತ್​ನ ಜುನಾಗಢದಲ್ಲಿ ನಡೆದಿದೆ.

ತಾಯಿ ಭಾರತಿ ಆತನನ್ನು ಸ್ನಾನಕ್ಕೆ ಬರುವಂತೆ ಕರೆದಿದ್ದರು, ಆದಿತ್ಯನಿಗೆ ನಿತ್ಯ ಆಟವಾಡುವ ಆಸೆ, ಯಾರು ಸ್ನಾನ ಮಾಡ್ತಾರೆ ಎನ್ನುವ ಆಲಸ್ಯ ಹಾಗಾಗಿ ಅಲ್ಲೇ ಹತ್ತಿರದ ಕಾರ್ಖಾನೆಯೊಂದರಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಹತ್ತಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಬಾಗಿಲು ಮುಚ್ಚಿದೆ, ಬಾಗಿಲು ತೆರೆಯುವುದು ಹೇಗೆ ಎಂದು ತೋಚದೆ ಉಸಿರುಕಟ್ಟಿ ಮೃತಪಟ್ಟಿದ್ದಾನೆ.

ಪಾಲಕರು ತೀವ್ರ ಹುಡುಕಾಟ ನಡೆಸಿದರೂ ಆದಿತ್ಯ ಎಲ್ಲಿದ್ದಾನೆ ಎಂಬುದು ಗೊತ್ತಾಗಲಿಲ್ಲ. ಕಾರ್ಖಾನೆಯ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಮಗು ಕಾರಿನೊಳಗೆ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆದಿತ್ಯನನ್ನು ವಾಹನದಿಂದ ಹೊರತರುವಷ್ಟರಲ್ಲಿ ಆತ ಪ್ರಜ್ಞಾಹೀನನಾಗಿದ್ದ. ಪೋಷಕರು ಆತನನ್ನು ಜುನಾಗಢ್ ಆಸ್ಪತ್ರೆಗೆ ಕರೆದೊಯ್ದರು ಬಳಿಕ ರಾಜ್​ಕೋಟ್​ಗೆ ಕರೆದೊಯ್ಯಲಾಯಿತು, ಆದರೆ ವೈದ್ಯಕೀಯ ತಂಡದ ಉತ್ತಮ ಪ್ರಯತ್ನಗಳ ಹೊರತಾಗಿಯೂ, ಆದಿತ್ಯ ಉಸಿರಾಡಲು ಕಷ್ಟಪಡುತ್ತಿದ್ದ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Leave a Reply

You May Have Missed

error: Content is protected !!