ಉಜಿರೆ ಶ್ರೀ ಧಂ.ಮಂ ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಬೃಹತ್ ಅಭಿಯಾನ

ಉಜಿರೆ ಶ್ರೀ ಧಂ.ಮಂ ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಬೃಹತ್ ಅಭಿಯಾನ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸ್ಥಳೀಯ ಧರ್ಮಸ್ಥಳ ಪಂಚಾಯತ್, ಎಸ್.ಕೆ.ಡಿ.ಆರ್.ಪಿ, ಕೃಷಿ ಪತ್ತಿನ ಸಹಕಾರ ಸಂಘ, ಕನ್ಯಾಕುಮಾರಿ ಯುವತಿ ಮಂಡಲ, ಸಂಜೀವಿನಿ ಮಹಿಳಾ ಕೂಟ ಹಾಗೂ ಸ್ಥಳೀಯರೊಂದಿಗೆ ಮಾನ್ಯ ಪ್ರಧಾನಮಂತ್ರಿಗಳು ಕರೆ ನೀಡಿದ ಏಕ್ ತಾರೀಖ್ ಏಕ್ ಘಂಟಾ’ ರಾಷ್ಟ್ರೀಯ ಕಾರ್ಯಕ್ರಮದ ಪ್ರಯುಕ್ತ ಬೃಹತ್ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಸಿದರು.

ನಾಯಕ ಸುದರ್ಶನ ನಾಯಕ್ ಹಾಗೂ ನಾಯಕಿ ದಕ್ಷಾ ನೇತೃತ್ವದಲ್ಲಿ ಪರಿಸರದ ಪ್ಲಾಸ್ಟಿಕ್ ಹಾಗೂ ಕಸಗಳ ಸಂಗ್ರಹ ಹಾಗೂ ದೇವಳ ವಠಾರದ ಬೀದಿಗಳಲ್ಲಿ ಸ್ವಯಂ ಸೇವಕರು ಸ್ವಚ್ಛತೆಯನ್ನು ಮಾಡಿದರು.

ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಮಾರ್ಗದರ್ಶನ ನೀಡಿದರು. ಧರ್ಮಸ್ಥಳ ಪಂಚಾಯತ್ ಇದರ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮಾಭಿವೃದ್ದಿ ಅಧಿಕಾರಿ ಹಾಗೂ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದರು.

Leave a Reply

You May Have Missed

error: Content is protected !!