ಉಜಿರೆ ಶ್ರೀ ಧ.ಮಂ.ಪ.ಪೂ ಕಾಲೇಜು ಎನ್ನೆಸ್ಸೆಸ್ : ಗಾಂಧಿ ಹಾಗೂ ಶಾಸ್ತ್ರೀ ಜಯಂತಿ

ಉಜಿರೆ ಶ್ರೀ ಧ.ಮಂ.ಪ.ಪೂ ಕಾಲೇಜು ಎನ್ನೆಸ್ಸೆಸ್ : ಗಾಂಧಿ ಹಾಗೂ ಶಾಸ್ತ್ರೀ ಜಯಂತಿ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸಿದ್ದವವ ಗುರುಕುಲ ಹಾಗೂ ಮೈತ್ರೇಯಿ ವಸತಿ ನಿಲಯಗಳಲ್ಲಿ ಸ್ವಯಂ ಸೇವಕರು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ನಡೆಸಿದರು.

ಸಿದ್ದವನದಲ್ಲಿ ನಿಲಯ ಪಾಲಕರಾದ ಕೇಶವ ಬೆಳಾಲು ಅವರು ಅಧ್ಯಕ್ಷತೆ ವಹಿಸಿದ್ದರು. ಸ್ವಯಂ ಸೇವಕರಾದ ಬೊರೇಶ್ ಹಾಗೂ ಕಾರ್ತಿಕ್ ಅವರು ಗಾಂಧೀ ಹಾಗೂ ಶಾಸ್ತ್ರೀ ಅವರ ಜೀವನದ ಬಗ್ಗೆ ಮಾತನಾಡಿದರು.

ಸ್ವಯಂ ಸೇವಕರು ಪುಷ್ಪ ನಮನ ಸಲ್ಲಿಸಿದರು. ನಾಯಕ ಸುದರ್ಶನ್ ನಾಯಕ್ ಸ್ವಾಗತಿಸಿ ನಿರೂಪಿಸಿದರು. ವಂಶಿ ಭಟ್ ವಂದಿಸಿದರು.

ಮೈತ್ರೇಯಿ ವಸತಿ ನಿಲಯದಲ್ಲಿ ಸ್ವಯಂ ಸೇವಕಿ ಸಾಕ್ಷಿ ಅವರು ಗಾಂಧೀ ಹಾಗೂ ಶಾಸ್ತ್ರೀ ಅವರ ಬಗ್ಗೆ ಮಾತನಾಡಿದರು. ಪ್ರಾಪ್ತಿ ನಿರೂಪಿಸಿ ವಂದಿಸಿದರು. ನಿಲಯ ಪಾಲಕಿ ಜಯಶ್ರೀ ಹಾಗೂ ಘಟಕ ನಾಯಕಿ ದಕ್ಷಾ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!