Bigg Boss Kannada 10: ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಇವರೇ ನೋಡಿ

Bigg Boss Kannada 10: ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಇವರೇ ನೋಡಿ

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಯಾರೆಲ್ಲಾ ಕಾಲಿಟ್ಟಿದ್ದಾರೆ ಎಂಬ ಕುತೂಹಲಕ್ಕ ಇಂದು ಸಂಜೆ ತೆರೆ ಬೀಳಲಿದೆ. ಅದಕ್ಕೂ ಬಿಗ್ ಬಾಸ್ ಸ್ಪರ್ಧಿಗಳು ಲಿಸ್ಟ್ ಲೀಕ್ ಆಗಿದೆ. ಯಾರು ಯಾರು ಮನೆಯೊಳಗೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಡ್ರೋನ್ ಪ್ರತಾಪ್, ಕರ‍್ತಿಕ್ ಮಹೇಶ್, ರಕ್ಷಕ್ ಬುಲೆಟ್, ತ್ರಿಪುರ ಸುಂದರಿ ಹೀರೋ ಅಭಿನವ್, ಈಶಾನಿ, ಕಾಮಿಡಿ ಕಿಲಾಡಿಗಳು ಸಂತೋಷ್, ಸಂಗೀತಾ ಶೃಂಗೇರಿ, ಚರ‍್ಲಿ, ನಾಗಿಣಿ 2 ನಮ್ರತಾ ಗೌಡ, ಸ್ನೇಕ್ ಶ್ಯಾಮ್, ವಿನಯ್ ಗೌಡ, ನೀತು ವನಜಾಕ್ಷಿ, ತನಿಶಾ ಕುಪ್ಪಂಡ, ‘ಲಕ್ಷಣ’ ನಟಿ ಭಾಗ್ಯಾ ಈ ಶೋನಲ್ಲಿ ಸ್ರ‍್ಧಿಗಳಾಗಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

ಅಕ್ಟೋಬರ್ 8ರ ಸಂಜೆ 6ಕ್ಕೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಸದ್ಯ ರಿಲೀಸ್ ಆಗಿರುವ ಸೀಸನ್ 10ರ ಬಿಗ್ ಬಾಸ್ ಪ್ರೋಮೋ ಕೂಡ ಗಮನ ಸೆಳೆಯುತ್ತಿದೆ.

ಬಿಗ್‌ ಬಾಸ್‌ ಪ್ರೋಮೋದಲ್ಲಿ ಒಬ್ಬ ರಾವಣ, 10 ತಲೆ, ಒಂದೇ ಮನೆ 10 ಸೀಸನ್ ಎಂಬ ಸುದೀಪ್ ಡೈಲಾಗ್ ಖಡಕ್ ಆಗಿ ಮೂಡಿ ಬಂದಿದೆ.

ದೊಡ್ಮನೆ ವೇದಿಕೆಯಲ್ಲಿ ಈ ಹಿಂದಿನ ಸೀಸನ್‌ಗಳ ವಿಜೇತರಾದ ಹಿರಿಯ ನಟಿ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಭಾಗಿಯಾಗುವ ಮೂಲಕ ಕಾರ‍್ಯಕ್ರಮದ ಕಳೆಯನ್ನ ಹೆಚ್ಚಿಸಿದ್ದಾರೆ. ಬಿಗ್ ಬಾಸ್ ಶುರುವಿಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

Leave a Reply

You May Have Missed

error: Content is protected !!