ನೆಲ್ಯಾಡಿ: ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

ಸರ್ವೋದಯ ಪ್ರೌಢಶಾಲೆ ಪೆರಿಯಡ್ಕದಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮೊಹಮ್ಮದ್ ಮುರ್ ತಳ ಚಕ್ರ ಎಸೆತ, ಗುಂಡು ಎಸೆತ ಪ್ರಥಮ ಹಾಗೂ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದು ಶಾಲೆಗೆ ಹೆಮ್ಮೆ ತಂದಿರುತ್ತಾರೆ.
ಶಝಾ ಫಾತಿಮಾ, ಚಕ್ರ ಎಸೆತ ಪ್ರಥಮ, ಗುಂಡು ಎಸೆತ ದ್ವಿತೀಯ, ಶಝಾ 200 ಮೀಟರ್ ಪ್ರಥಮ, ನಿಖಿಲ್ 600 ಮೀಟರ್ ದ್ವಿತೀಯ ಸ್ಥಾನ ಪಡೆದಿದರುತ್ತಾರೆ. ಶಝಾ, ಫಾತಿಮತ್ ಸಿಫಾನ, ಕೀರ್ತನಾ ತಸ್ಲೀಮಾ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಲೀಲಾವತಿ ಎಂ ಹಾಗೂ ಶಿವ ಪ್ರಸಾದ್ ದುಗ್ಗಲ ಇವರು ತರಬೇತಿ ನೀಡಿರುತ್ತಾರೆ.
ಮುಖ್ಯ ಗುರುಗಳಾದ ಶ್ರೀಮತಿ ಜೆಸ್ಸಿ ಕೆ.ಎ. ಹಾಗೂ ಶಾಲೆಯ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿರುತ್ತಾರೆ.
















Leave a Reply