ಭಾರತ, ಹಿಂದೂ ಧರ್ಮ ಅವಹೇಳನ – ಪಾಕ್‌ ನಿರೂಪಕಿ ಗಡೀಪಾರು

ಭಾರತ, ಹಿಂದೂ ಧರ್ಮ ಅವಹೇಳನ – ಪಾಕ್‌ ನಿರೂಪಕಿ ಗಡೀಪಾರು

ಭಾರತ ಮತ್ತು ಹಿಂದೂ ವಿರೋಧಿ ಟ್ವೀಟ್‌ ಮಾಡಿದ್ದಕ್ಕೆ ಪಾಕಿಸ್ತಾನ ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್‌ಳನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಿದೆ.

https://twitter.com/KhushiViews/status/1710176712003387444?ref_src=twsrc%5Etfw%7Ctwcamp%5Etweetembed%7Ctwterm%5E1710176712003387444%7Ctwgr%5E0a81b076e7059be949e38682becd507e1291ecfc%7Ctwcon%5Es1_&ref_url=https%3A%2F%2Fpublictv.in%2Fcricket-world-cup-2023-pakistan-sports-presenter-zainab-abbas-in-legal-trouble-over-her-anti-hindu-remarks%2F

ವಕೀಲ ವಿನೀತ್‌ ಜಿಂದಾಲ್‌ ಅವರು ದೆಹಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಆರೋಪ ಹೊರಿಸಿ ಜೈನಾಬ್ ಅಬ್ಬಾಸ್‌ ವಿರುದ್ಧ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಐಸಿಸಿ ವಿಶ್ವಕಪ್‌ ನಿರೂಪಕಿ ಸ್ಥಾನದಿಂದ ಕೂಡಲೇ ತೆಗೆದುಹಾಕಬೇಕೆಂದು ಐಸಿಸಿ ಮತ್ತು ಬಿಸಿಸಿಐಗೆ ದೂರು ನೀಡಿದ್ದರು. ಈ ದೂರಿನ ಬೆನ್ನಲ್ಲೇ ಜೈನಾಬ್‌ಳನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿದೆ.
ಈ ಸಂಬಂಧ ಸಮಾ ಟಿವಿ ಟ್ವೀಟ್‌ ಮಾಡಿದ್ದು, ಪಾಕಿಸ್ತಾನಿ ಕ್ರೀಡಾ ನಿರೂಪಕಿ ಝೈನಾಬ್ ಅಬ್ಬಾಸ್ ಅವರು ಸುರಕ್ಷತಾ ಕಾಳಜಿಯಿಂದ ಭಾರತದಿಂದ ನಿರ್ಗಮಿಸಿದ್ದಾರೆ. ಸದ್ಯ ಅವರು ದುಬೈನಲ್ಲಿದ್ದಾರೆ ಎಂದು ಹೇಳಿದೆ.

ನಮ್ಮ ದೇಶ ಮತ್ತು ಹಿಂದೂ ಧರ್ಮವನ್ನು ಗೌರವಿಸುವವರಿಗೆ ಮಾತ್ರ ಅತಿಥಿ ದೇವೋ ಭವ. ಆದರೆ ನಮ್ಮ ಭೂಮಿಯಲ್ಲಿ ಭಾರತೀಯ ವಿರೋಧಿಗಳು ಸ್ವಾಗತಿಸುವುದಿಲ್ಲ ವಿನೀತ್‌ ಜಿಂದಾಲ್‌ ಬರೆದುಕೊಂಡಿದ್ದಾರೆ.

ಈ ಹಿಂದೆ ಭಾರತ ವಿರೋಧಿ ಮಾಡಿದ ಟ್ವೀಟ್‌ ಗಳನ್ನು ಝೈನಾಬ್ ಅಬ್ಬಾಸ್ ಡಿಲೀಟ್‌ ಮಾಡಿದ್ದರೂ ಈಗ ವೈರಲ್‌ ಆಗುತ್ತಿದೆ. ಭಾರತದ ಕ್ರಿಕೆಟ್‌ ಅಭಿಮಾನಿಗಳು ಐಸಿಸಿ, ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದರೆ ಪಾಕಿಸ್ತಾನದ ಅಭಿಮಾನಿಗಳು ಭಾರತ ಸರ್ಕಾರವನ್ನು ದೂಷಣೆ ಮಾಡಲು ಆರಂಭಿಸಿದ್ದಾರೆ.

Leave a Reply

You May Have Missed

error: Content is protected !!