ರೈಲ್ವೇ ಹಳಿಗೆ ಉರುಳಿ ಬಿದ್ದ ಕಾಂಕ್ರೀಟ್‌ ಮಿಕ್ಸರ್‌ ಮೆಷಿನ್‌

ರೈಲ್ವೇ ಹಳಿಗೆ ಉರುಳಿ ಬಿದ್ದ ಕಾಂಕ್ರೀಟ್‌ ಮಿಕ್ಸರ್‌ ಮೆಷಿನ್‌

ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್‌ ಮಿಕ್ಸರ್‌ ಮೆಷಿನ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ್ ನಿಂದ ರೈಲ್ವೇ ಹಳಿಗೆ ಬಿದ್ದ ಘಟನೆ ಬುಧವಾರ ನಡೆದಿದೆ.

ಘಟನೆಯಲ್ಲಿ ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಸಂಜೆಯ ವೇಳೆಗೆ ಘಟನೆ ನಡೆದಿದ್ದು, ಈ ವೇಳೆ ಯಾವುದೇ ರೈಲು ಆಗಮಿಸದ ಹಿನ್ನೆಲೆಯಲ್ಲಿ ತೊಂದರೆ ಉಂಟಾಗಿಲ್ಲ. ಹಳಿಯಿಂದ ಮೆಷಿನ್‌ ಅನ್ನು ತತ್‌ಕ್ಷಣ ತೆರವುಗೊಳಿಸಲಾಯಿತು.

Leave a Reply

You May Have Missed

error: Content is protected !!