ಜನವಸತಿ ಪ್ರದೇಶಗಳಲ್ಲಿ ಕಾಡುಕೋಣಗಳ ಹಿಂಡಿನ ಸಂಚಾರ

ಜನವಸತಿ ಪ್ರದೇಶಗಳಲ್ಲಿ ಕಾಡುಕೋಣಗಳ ಹಿಂಡಿನ ಸಂಚಾರ

ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಸಂತಡ್ಕ ಹಾಗೂ ಜನವಸತಿ ಪ್ರದೇಶಗಳಲ್ಲಿ ಹತ್ತಾರು ಕಾಡುಕೋಣಗಳ ಹಿಂಡು ಕಂಡುಬಂದಿದ್ದು ಗ್ರಾಮಸ್ಥರು ಭೀತರಾಗಿದ್ದಾರೆ.

ಕೆಯ್ಯೂರು ಗ್ರಾಮದ ಕಣಿಯಾರು ಮಲೆಯಲ್ಲಿ ಚಿರತೆಯು ದನವನ್ನು ಕೊಂದು ರಬ್ಬರ್‌ ಮರದಲ್ಲಿಟ್ಟ ಘಟನೆಯಿಂದ ಆತಂಕದಲ್ಲಿರುವ ಜನತೆಗೆ ಕೆಯ್ಯೂರು ಗ್ರಾಮದ ಪಕ್ಕದ ಪಾಲ್ತಾಡಿಯಲ್ಲಿ ಕಾಡುಕೋಣಗಳ ಹಿಂಡಿನ ಸಂಚಾರ ಆತಂಕವನ್ನು ಹೆಚ್ಚಿಸಿದೆ.

ಕಳೆದ ವರ್ಷವೂ ಅಸಂತಡ್ಕ, ಬಂಬಿಲ, ಅಂಕತಡ್ಕ ಪ್ರದೇಶಗಳಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿದ್ದವು. ಅರಣ್ಯ ಇಲಾಖೆಯವರು ಕೂಡಲೇ ಕಾಡುಕೋಣಗಳ ಹಿಂಡನ್ನು ರಕ್ಷಿತಾರಣ್ಯಕ್ಕೆ ಓಡಿಸುವಂತೆ ಆಗ್ರಹ ವ್ಯಕ್ತವಾಗಿದೆ.

Previous post

ರೈಲ್ವೇ ಹಳಿಗೆ ಉರುಳಿ ಬಿದ್ದ ಕಾಂಕ್ರೀಟ್‌ ಮಿಕ್ಸರ್‌ ಮೆಷಿನ್‌

Next post

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅರಣ್ಯಾಧಿಕಾರಿಗೆ ಏಕವಚನದಲ್ಲಿ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿದ ಪ್ರಕರಣ; ಕರ್ನಾಟಕ ರಾಜ್ಯ ಅರಣ್ಯಾಧಿಕಾರಿಗಳ ಸಂಘ ಖಂಡನೆ

Leave a Reply

You May Have Missed

error: Content is protected !!