ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ

ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೇಖಕಿ, ಕವಯತ್ರಿ ಡಾ. ಅನುರಾಧಾ ಕುರುಂಜಿಯವರು ಮಡಿಕೇರಿ ದಸರ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ.
ಅಕ್ಟೋಬರ್ 18 ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಇವರು ಕವನ ವಾಚಿಸಲಿದ್ದು ಈ ಹಿಂದೆ ಹಂಪಿ ಉತ್ಸವ ಹಾಗೂ ತಾಲೂಕು, ಜಿಲ್ಲೆ, ರಾಜ್ಯ, ಕೇರಳ ರಾಜ್ಯ, ಕಾಸರಗೋಡು ಮೊದಲಾದ ಕಡೆಗಳಲ್ಲಿ ಕವನ, ಚುಟುಕು ವಾಚನಗಳನ್ನು ಮಾಡಿದುದಲ್ಲದೇ ಮಂಗಳೂರು, ಮಡಿಕೇರಿ ಆಕಾಶವಾಣಿಗಳಲ್ಲೂ ಕವನ ವಾಚಿಸಿದ್ದರು.

ಇವರು ಈಗಾಗಲೇ “ಮೌನವನು ಮುರಿದಾಗ” ಎಂಬ ಕವನ ಸಂಕಲನವನ್ನು ಹೊರತಂದಿದ್ದು, “ಜೀವನ ಪಯಣ” ಕವನ ಸಂಕಲನ ಪ್ರಕಟಣಾ ಹಂತದಲ್ಲಿದೆ.

Leave a Reply

You May Have Missed

error: Content is protected !!