ಎಪಿಎಲ್ ಪಡಿತರ ಚೀಟಿಯ ಫಲಾನುಭವಿಗಳಿಗೆ ಪಡಿತರ ಒದಗಿಸುವ ಕುರಿತು ಸಚಿವರಿಗೆ ಸುಳ್ಯ ಶಾಸಕರಿಂದ ಮನವಿ

ಎಪಿಎಲ್ ಪಡಿತರ ಚೀಟಿಯ ಫಲಾನುಭವಿಗಳಿಗೆ ಪಡಿತರ ಒದಗಿಸುವ ಕುರಿತು ಸಚಿವರಿಗೆ ಸುಳ್ಯ ಶಾಸಕರಿಂದ ಮನವಿ

ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಮತ್ತು ಕಡಬ ತಾಲೂಕಿನ ಎಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಸುಮಾರು ಮೂರು ತಿಂಗಳಿನಿಂದ ಪಡಿತರ ಪೂರೈಕೆಯಾಗದಿರುವ ಬಗ್ಗೆ ಪಡಿತರ ಆನ್ಲೈನ್ ತಂತ್ರಾಂಶದಲ್ಲಿ Willingness ಆಯ್ಕೆಯನ್ನು ಬ್ಲಾಕ್ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಹೆಚ್ಚಿನ ಫಲಾನುಭವಿಗಳಿಗೆ ಇದರಿಂದ ತೊಂದರೆಯಾಗುತ್ತಿದ್ದು, ಸದರಿ ಪಡಿತರವನ್ನು ಸೂಕ್ತ ರೀತಿಯಲ್ಲಿ ಫಲಾನುಭವಿಗಳಿಗೆ ಪಡಿತರ ಪೊರೈಸುವಂತೆ ಮತ್ತು ಪಡಿತರ ಬೇಡಿಕೆಗೆ ಆನ್‌ಲೈನ್ ನಲ್ಲಿ Willingness ಆಯ್ಕೆಗೆ ಅವಕಾಶ ಕಲ್ಪಿಸಬೇಕೆಂದು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರನ್ನು ಬೆಂಗಳೂರು ವಿಧಾನಸೌಧದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ಮಾಡಿ ಮನವಿ ಸಲ್ಲಿಸಿದರು.

Leave a Reply

You May Have Missed

error: Content is protected !!