ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಸರ್ವೋದಯ ಶಾಲೆ ಪೆರಿಯಡ್ಕ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ.

ಸೈಂಟ್ ಆಂಟನೀಸ್ ಪ್ರೌಢಶಾಲೆಯ ನವನೀತ್.ಬಿ 800 ಮೀಟರ್ ಪ್ರಥಮ, ಶೋಬಿತ್ 400 ಮೀಟರ್ ದ್ವಿತೀಯ, ಜ್ಯೋತಿ 400 ಮೀಟರ್ ದ್ವಿತೀಯ, ಹರ್ಷ ಜಾವಲಿನ್ ಮತ್ತು ಗುಂಡೆಸೆತ ತೃತೀಯ, ಬಾಲಕಿಯರ ರಿಲೇಯಲ್ಲಿ ದೀಕ್ಷಾ, ಶ್ರಾವ್ಯ, ನಿಶಾ ಮ್ಯಾಥ್ಯೂ, ಪಾತಿಮತ್ ಮಶ್ರೂಪ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡರು.

ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್‌ ಸ್ಕೂಲ್ ನ ಹನಿ ಉದ್ದ ಜಿಗಿತ ಪ್ರಥಮ, ತ್ರಿವಿಧ ಜಿಗಿತ ತೃತೀಯ, ವೈಶಾಲಿ 100 ಮೀಟರ್ ಓಟ ದ್ವಿತೀಯ,
ಪ್ರಾಥಮಿಕ ವಿಭಾಗದಲ್ಲಿ ಅರ್ಚನಾ ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ, ಆನ್ಸಿಲಾ ಎತ್ತರ ಜಿಗಿತ ತೃತೀಯ, ಮೆರ್ಲಿನ್ 100 ಮೀಟರ್ ಓಟ ತೃತೀಯ, 400 ಮೀಟರ್ ಓಟ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ದೈಹಿಕ ಶಿಕ್ಷಕರಾದ ರಾಜೇಶ್ ರೈ, ಜಿಮ್ಸನ್ ವರ್ಗೀಸ್ ತರಬೇತುಗೊಳಿಸಿದ್ದರು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಎಲ್ಲರನ್ನು ಅಭಿನಂದಿಸಿದರು‌‌.

Leave a Reply

You May Have Missed

error: Content is protected !!