ಹುಲಿ ಉಗುರು ಹೋಲುವ ಲೋಕೆಟ್ ; ನ.ಪಂ. ಉದ್ಯೋಗಿಯ ಫೋಟೊ ವೈರಲ್

ಹುಲಿ ಉಗುರು ಹೋಲುವ ಲೋಕೆಟ್ ; ನ.ಪಂ. ಉದ್ಯೋಗಿಯ ಫೋಟೊ ವೈರಲ್

ಸುಳ್ಯ ನಗರ ಪಂಚಾಯತ್ ಉದ್ಯೋಗಿಯೋರ್ವರು ಹುಲಿ ಉಗುರು ಹೋಲುವ ಲೋಕೆಟ್ ಧರಿಸಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ಸುಳ್ಯದ ನಗರ ಪಂಚಾಯತ್ ಉದ್ಯೋಗಿ ಶಶಿಕಲಾ ಅವರ ಫೋಟೊ ಇದೇ ಕಾರಣಕ್ಕೆ ವೈರಲ್ ಆಗಿದೆ. ಬಿಗ್‍ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿರುವ ಆರೋಪದಡಿ ಬಂಧನವಾದ ಬೆನ್ನಲ್ಲೇ ಹಲವು ನಟರು ಹುಲಿ ಉಗುರು ಹೋಲುವ ಸರಗಳನ್ನು ಧರಿಸಿದ ಫೋಟೊ ವೈರಲ್ ಆಗಿತ್ತು. ಜತೆಗೆ ಅರಣ್ಯ ಇಲಾಖೆ ತನಿಖೆ ಯನ್ನು ಕೈಗೆತ್ತಿಕೊಂಡಿದೆ. ಇದೀಗ ಸುಳ್ಯದ ನಗರ ಪಂಚಾಯತ್ ಉದ್ಯೋಗಿ ಶಶಿಕಲಾ ಅವರ ಫೋಟೊ ಇದೇ ಕಾರಣಕ್ಕೆ ವೈರಲ್ ಆಗಿದೆ.

ನಗರ ಪಂಚಾಯತ್ ಸಿಬ್ಬಂದಿ ತೆಗೆಸಿಕೊಂಡಿದ್ದ ಫೋಟೊವೊಂದರಲ್ಲಿ ಶಶಿಕಲಾ ಅವರ ಕೊರಳಿನಲ್ಲಿ ಹುಲಿ ಉಗುರು ಹೋಲುವ ಲೋಕೇಟ್ ಕಂಡು ಬರುತ್ತಿತ್ತು. ಈ ಫೋಟೊ ಬುಧವಾರ ರಾತ್ರಿಯಿಂದ ವೈರಲ್ ಆಗುತ್ತ ಬಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅರಣ್ಯ ಅಧಿಕಾರಿಗಳು ಶಶಿಕಲಾ ಅವರನ್ನು ಸಂಪರ್ಕಿಸಿ ಕಚೇರಿಗೆ ಬರಲು ತಿಳಿಸಿದ್ದು, ಶಶಿಕಲಾ ಅವರು ತೆರಳಿ ಲೋಕೆಟ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಅಧಿಕಾರಿಗಳು ಹುಲಿ ಉಗುರು ಹೋಗುವ ಲೋಕೆಟ್ ನ್ನು ಪರಿಶೀಲನಾ ಕೇಂದ್ರಕ್ಕೆ ಕಳುಹಿಸಿದ್ದು, (ಎಫ್‍ಎಸ್‍ಎಲ್) ವರದಿಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಮೇಲಾಧಿಕಾರಿಗಳು ಕೂಡ ಇಲ್ಲಿನ ವಾಸ್ತವತೆ ಬಗ್ಗೆ ಮಾಹಿಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Leave a Reply

You May Have Missed

error: Content is protected !!