ಟ್ಯಾಂಕರ್ ಢಿಕ್ಕಿ; ಯುವಕ ಸ್ಥಳದಲ್ಲೇ ಮೃತ್ಯು

ಟ್ಯಾಂಕರ್ ಢಿಕ್ಕಿ; ಯುವಕ ಸ್ಥಳದಲ್ಲೇ ಮೃತ್ಯು

ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರೆ ಪೇಟೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ‌ ನಡೆದಿದೆ.

ಮೃತನನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ.

ಮಂಗಳೂರು ಕಡೆಗೆ ತೆರಳುವ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸೊಂದು ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ವೇಳೆ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಪ್ರಜ್ವಲ್‌ ರಸ್ತೆಗೆ ಎಸೆಯಲ್ಪಟ್ಟಿದ್ದರು. ಈ ವೇಳೆ ಟ್ಯಾಂಕರ್ ಅವರ ಮೇಲೆ ಹರಿದ ಪರಿಣಾಮ ಪ್ರಜ್ವಲ್ ಸ್ಥಳದಲ್ಲೇ ಮೃತಪಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Previous post

ದ.ಕ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ವೇಳೆ ಸ್ಮಶಾನದಲ್ಲಿ ಗೋರಿಗಳಿಗೆ ನಡೆಯಿತು ವಿಶೇಷ ಪೂಜೆ! ಏನಿದು ಸ್ಟೋರಿ ಅಂತ ಅಚ್ಚರಿ ಪಡ್ತಾ ಇದ್ದೀರಾ..? ಹಾಗಿದ್ರೆ ಈ ಸ್ಟೋರಿ ನೋಡಿ..

Next post

ಅದೃಷ್ಟ ತರುತ್ತಾ ಈ ಚಿತ್ರಗಳು..ಏನನ್ನತ್ತೆ ವಾಸ್ತು ಶಾಸ್ತ್ರ?

Leave a Reply

You May Have Missed

error: Content is protected !!