ಸ್ಕಿಡ್‌ ಆಗಿ ತಡೆಗೋಡೆಗೆ ಬಡಿದ ಸ್ಕೂಟರ್‌: ಇಬ್ಬರಿಗೆ ಗಾಯ

ಸ್ಕಿಡ್‌ ಆಗಿ ತಡೆಗೋಡೆಗೆ ಬಡಿದ ಸ್ಕೂಟರ್‌: ಇಬ್ಬರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟರ್‌ ಸ್ಕಿಡ್‌ ಆಗಿ ಸೇತುವೆಯ ತಡೆಗೋಡೆಗೆ ಬಡಿದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್‌ ಸೇತುವೆಯ ತಡೆಗೋಡೆಗೆ ಕಡಿರುದ್ಯಾವರದ ಚಂದ್ರಶೇಖರ್‌ (22) ಅವರು ಚಲಾಯಿಸುತ್ತಿದ್ದ ಸ್ಕೂಟರ್‌ ಢಿಕ್ಕಿ ಹೊಡೆದಿದ್ದು, ಅವರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಹಸವಾರ ಚಿಬಿದ್ರೆಯ ರಕ್ಷಿತ್‌ (21) ಅವರಿಗೂ ಗಾಯಗಳಾಗಿದ್ದು, ಅವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಕುರಿತು ಸಹಸವಾರ ರಕ್ಷಿತ್‌ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You May Have Missed

error: Content is protected !!