ಅರಣ್ಯ ತಪಾಸಣಾ ಚೆಕ್‌ಪೋಸ್ಟ್‌ ಗೇಟಿಗೆ ಲಾರಿ ಢಿಕ್ಕಿ

ಅರಣ್ಯ ತಪಾಸಣಾ ಚೆಕ್‌ಪೋಸ್ಟ್‌ ಗೇಟಿಗೆ ಲಾರಿ ಢಿಕ್ಕಿ

ಅರಂತೋಡು: ಸಂಪಾಜೆಯ ಅರಣ್ಯ ತಪಾಸಣಾ ಚೆಕ್‌ಪೋಸ್ಟ್‌ ಗೇಟಿಗೆ ಲಾರಿಯೊಂದು ಢಿಕ್ಕಿ ಹೊಡೆದು ಜಖಂಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ತಮಿಳುನಾಡು ಮೂಲದ ಲಾರಿಯೊಂದು ಬ್ರೇಕ್‌ ವೈಫ‌ಲ್ಯಗೊಂಡ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿ ಅರಣ್ಯ ತಪಾಸಣ ಚೆಕ್‌ಪೋಸ್ಟ್‌ ಗೇಟಿಗೆ ಢಿಕ್ಕಿಯಾಗಿತ್ತು.

ಗೇಟು ಹಾಗೂ ಲಾರಿಯ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಲಾರಿಯ ಬ್ರೇಕ್‌ ವೈಫ‌ಲ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

Leave a Reply

You May Have Missed

error: Content is protected !!