ದುಬಾರಿ ನಾಯಿಯನ್ನು ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ

ದುಬಾರಿ ನಾಯಿಯನ್ನು ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ

ದುಬಾರಿ ನಾಯಿ ಮೇಲಿನ ಪ್ರೀತಿ ಓರ್ವ ಯುವಕನನ್ನು ಬಲಿಪಡೆದಿದೆ. ತಾನು ಕೇಳಿದ ನಾಯಿಯನ್ನು ಪೋಷಕರು ಕೊಡಿಸಲಿಲ್ಲವೆಂದು ಮನನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಮಿಷನ್ ಕಾಪೌಂಡ್‌ನಲ್ಲಿ ಈ ಘಟನೆ ನಡೆದಿದ್ದು, ಅಲೆನ್ ಭಸ್ಮೆ (24) ಆತ್ಮಹತ್ಯೆಗೆ ಶರಣಾದ ಯುವಕ. ಅಲೆನ್ ನಾಯಿ ಪ್ರೇಮಿಯಾಗಿದ್ದು, 2 ಲಕ್ಷ ರೂ. ಮೌಲ್ಯದ ನಾಯಿಮರಿಯನ್ನು ಕೊಡಿಸುವಂತೆ ತಾಯಿಯ ಬಳಿ ಹಠ ಮಾಡುತ್ತಿದ್ದ.

ಮಗನ ಕಾಟಕ್ಕೆ ಬೇಸತ್ತು ಅಲೆನ್ ತಾಯಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಮನೊಂದ ಅಲೆನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಬಗ್ಗೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous post

ವೈದ್ಯಕೀಯ ಪದವಿ ಸ್ವೀಕರಿಸಿ ಮನೆಗೆ ಬರುತ್ತಿದ್ದಾಗ ಕಚ್ಚಿದ ಹಾವು, ಕುಸಿದುಬಿದ್ದು ದುರಂತ ಅಂತ್ಯಕಂಡ ವೈದ್ಯ

Next post

ದೃಷ್ಟಿ ಹೀನ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯ; ಎಫ್‌ಐಆರ್ ದಾಖಲು

Leave a Reply

You May Have Missed

error: Content is protected !!