ಯುವತಿಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗಾಗಿ ರೂ.14,61,179 ಹಸ್ತಾಂತರ

ಯುವತಿಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗಾಗಿ ರೂ.14,61,179 ಹಸ್ತಾಂತರ

ಆಪತ್ಬಾಂಧವ ಈಶ್ವರ್ ಮಲ್ಪೆ ಹಾಗೂ ತಂಡ ಮತ್ತು ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಪುತ್ತೂರು ಮನವಿಗೆ ಸ್ಪಂದಿಸಿದ ಜನತೆ. ಕುಮಟಾ ತಾಲ್ಲೂಕಿನ ಧಾರೇಶ್ವರದ ವಿಶಾಲ ಹರಿಕಾಂತ ಎಂಬ ಯುವತಿಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗಾಗಿ ಸುಮಾರು 15 ಲಕ್ಷ ರೂಪಾಯಿ ಅವಶ್ಯಕತೆ ಇತ್ತು. ಬಡ ಕುಟುಂಬದ ಈ ಯುವತಿಯ ಚಿಕಿತ್ಸೆಗೆ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮುಖಾಂತರ ಈಶ್ವರ್ ಮಲ್ಪೆಯವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದೃಶ್ಯಮಾಧ್ಯಮಗಳಲ್ಲಿ ಮನವಿ ಮಾಡಿದ್ದು ಸುಮಾರು ರೂ.14,61,179 ಸಂಗ್ರಹಿಸಲಾಯಿತು.

ಸಂಗ್ರಹದ ಹಣವನ್ನು ಇಂದು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಕುಮಟಾ ಠಾಣೆಯ ಠಾಣಾಧಿಕಾರಿ ಸಂಪತ್ ಕುಮಾರ್, ಆಪತ್ಬಾಂಧವ ಈಶ್ವರ್ ಮಲ್ಪೆ, ಸಹಾಯಹಸ್ತ ಟ್ರಸ್ಟಿನ ಮನೋಹರ್ ಪಲಯಮಜಲು, ಸಾಮಾಜಿಕ ಮುಂದಾಳು ಉಮಾಕಾಂತ್ ಹೊಸ್ಕಟ್ಟ, ಆಪತ್ಭಾಂದವ ಈಶ್ವರ್ ಮಲ್ಪೆ ತಂಡದ ಬಿಲಾಲ್ ಮಲ್ಪೆ ಹಾಗೂ ಹರಿಕಾಂತ ಸಮಾಜದ ಗಣ್ಯರು, ಸ್ಥಳೀಯ ಪಂಚಾಯತ್ ಅಧ್ಯಕ್ಷರು, ಹಾಗೂ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು.

ಸಹಾಯಹಸ್ತ ನೀಡಿರುವ ಮಹಾಜನತೆಗೆ ಹಾಗೂ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಿಗೆ ಈಶ್ವರ್ ಮಲ್ಪೆ ಮತ್ತು ತಂಡ ಹಾಗೂ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ವತಿಯಿಂದ ಧನ್ಯವಾದಗಳನ್ನು ಅರ್ಪಿಸಲಾಯಿತು.

Leave a Reply

You May Have Missed

error: Content is protected !!