ಉಪ್ಪಿನಕಾಯಿ ಕೇಳೋಕೆ ಬಂದು ಅತ್ಯಾಚಾರಕ್ಕೆ ಯತ್ನಿಸಿ, ಕೆನ್ನೆ ಕಚ್ಚಿದ: ಮಹಿಳೆ ಚೀರಾಡ್ತಿದ್ದಂತೆ ಪರಾರಿ!

ಉಪ್ಪಿನಕಾಯಿ ಕೇಳೋಕೆ ಬಂದು ಅತ್ಯಾಚಾರಕ್ಕೆ ಯತ್ನಿಸಿ, ಕೆನ್ನೆ ಕಚ್ಚಿದ: ಮಹಿಳೆ ಚೀರಾಡ್ತಿದ್ದಂತೆ ಪರಾರಿ!

ಮನೆಯಲ್ಲಿ ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿದ ಕಾಮುಕ ನನಗೆ ಉಪ್ಪಿನಕಾಯಿ ಬೇಕು ಎಂದು ಕೇಳುತ್ತಾ ಮನೆಯೊಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿ ಕೆನ್ನೆಯನ್ನು ಕಚ್ಚಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಉಪ್ಪಿನ ಕಾಯಿ ಕೇಳುವ ನೆಪದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಗ್ರಾಮಯೊಂದರಲ್ಲಿ‌ ನಡೆದಿದೆ. ಮಹಿಳೆಯ ಕೆನ್ನೆಗೆ ಕಚ್ಚಿ ಗಾಯಗೊಳಿಸಿ ಪರಾರಿಯಾದ ಆರೋಪಿ ಮಂಜಪ್ಪ ಅಲಿಯಾಸ್ ಮಂಜುನಾಥ್ ಡಿ.ಹೆಚ್. ಎಂದು ಹೇಳಲಾಗುತ್ತಿದೆ. ಡಿಸೆಂಬರ್ 2 ರಂದು ನಡೆದಿದ್ದ ಘಟನೆಯ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರು ಗುಂಪಾಗಿ ಬಂದು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

Leave a Reply

You May Have Missed

error: Content is protected !!