ನೆಲ್ಯಾಡಿ ಮೇಲ್ಸೇತುವೆ ನಿರ್ಮಿಸಲು ಸತೀಶ್ ಜಾರಕಿ ಹೋಳಿಯನ್ನು ಭೇಟಿಯಾದ ನಿಯೋಗ

ನೆಲ್ಯಾಡಿ ಮೇಲ್ಸೇತುವೆ ನಿರ್ಮಿಸಲು ಸತೀಶ್ ಜಾರಕಿ ಹೋಳಿಯನ್ನು ಭೇಟಿಯಾದ ನಿಯೋಗ

ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪದ ಕಾಮಗಾರಿಯಿಂದಾಗಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಎರಡು ಭಾಗವಾಗುತ್ತಿದ್ದು, ಭವಿಷ್ಯದಲ್ಲಿ ನೆಲ್ಯಾಡಿ ಪೇಟೆ ಇಲ್ಲದಂತಾಗಿದೆ, ಅಲ್ಲದೆ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳು ಉಂಟಾಗುತ್ತಿವೆ. ಈ ಕಾರಣದಿಂದ ಈ ಪೇಟೆ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಆ ಗ್ರಹಿಸಿ ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೋಳಿಯನ್ನು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ವಿಶೇಷವಾದ ಗಮನವನ್ನು ಹರಿಸುವುದರೊಂದಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ತಿಳಿಸಿದರು

ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಕಾರ್ಯದರ್ಶಿ ಪ್ರಶಾಂತ್ ಸಿ.ಎಚ್, ಜತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್.ಕೆ.ಎಸ್., ದುರ್ಗಾಶ್ರೀ, ಸದಸ್ಯರುಗಳಾದ ಪಿ.ಪಿ.ವರ್ಗೀಸ್, ಎಂ.ಕೆ., ಇಬ್ರಾಹಿಂ, ನಾಜಿಂ ಸಾಹೇಬ್, ರವಿಕುಮಾರ್ ಸುರಕ್ಷಾ, ವಿ.ಜೆ. ಜೋಸೆಫ್, ವಿಜೇಶ್ ಪಿ.ಎಸ್. ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!