ಗ್ಯಾರೇಜ್‍ ಗೆ ನುಗ್ಗಿದ ಲಾರಿ; ಪಲ್ಟಿಯಾದ ಟೆಂಪೋ ರಿಕ್ಷಾ

ಗ್ಯಾರೇಜ್‍ ಗೆ ನುಗ್ಗಿದ ಲಾರಿ; ಪಲ್ಟಿಯಾದ ಟೆಂಪೋ ರಿಕ್ಷಾ

ಪೆರ್ನೆಯ ಒಂದೇ ಪ್ರದೇಶದಲ್ಲಿ ಎರಡು ಅಪಘಾತಗಳು ನಡೆದಿರುವ ಬಗ್ಗೆ ವರದಿಯಾಗಿದೆ.ಜ.8 ಸೋಮವಾರ ಸಂಜೆ ಪೆರ್ನೆ ಜಂಕ್ಷನ್‍ನಿಂದ ಕೆಲವೇ ಅಂತರ ದೂರದಲ್ಲಿ ನಿಲ್ಲಿಸಿದ್ದ ಈಚರ್ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಚಂದ್ರಶೇಖರ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ಸಂದರ್ಭ ಗ್ಯಾರೇಜ್‍ನಲ್ಲಿ ಯಾರೂ ಇಲ್ಲದ್ದರಿಂದ ಅಪಾಯವೇನೂ ಸಂಭವಿಸಿಲ್ಲ. ಆದರೆ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಎರಡು ಬೈಕ್‍ಗಳಿಗೆ ಹಾಗೂ ಗ್ಯಾರೇಜ್‍ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿಯಿಂದ ಮಾಣಿ ಕಡೆ ತೆರಳುತ್ತಿದ್ದ ಮಿನಿ ಟೆಂಪೋವೊಂದರ ಬ್ರೇಕ್ ವೈಫಲ್ಯಕ್ಕೀಡಾಗಿದ್ದು, ಈ ಸಂದರ್ಭ ಗ್ಯಾರೇಜ್‍ಗೆ ಲಾರಿ ನುಗ್ಗಿದ್ದರಿಂದ ಅಲ್ಲಿ ಜನಸಂದಣಿ ಸೇರಿತ್ತು. ಸಮಯ ಪ್ರಜ್ಞೆ ಮೆರೆದ ಮಿನಿ ಟೆಂಪೋ ಚಾಲಕ ಇನ್ನೊಂದು ಬದಿಗೆ ಮಿನಿ ಟೆಂಪೋವನ್ನು ಚಲಾಯಿಸಿದ್ದು, ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಅಪಘಾತವಾದಾಗ ಸಾಮಾಜಿಕ ಮುಂದಾಳು ಕಿರಣ್ ಶೆಟ್ಟಿ ಪೆರ್ನೆ ಹಾಗೂ ಇತರರು ಸಕಾಲಕ್ಕೆ ನೆರವಿಗೆ ಬಂದರು.

Leave a Reply

You May Have Missed

error: Content is protected !!