ಸುಳ್ಯ : ಕ್ಷಯ ರೋಗ ನಿಯಂತ್ರಣ ಅಂಗವಾಗಿ ಬೀದಿ ನಾಟಕ

ಸುಳ್ಯ : ಕ್ಷಯ ರೋಗ ನಿಯಂತ್ರಣ ಅಂಗವಾಗಿ ಬೀದಿ ನಾಟಕ

ನೇಸರ ಫೆ.07: ಜೇಸಿಐ ಸುಳ್ಯ ಸಿಟಿ ಮತ್ತು ಕ್ಷಯ ರೋಗ ನಿಯಂತ್ರಣಾ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆ,ಆರೋಗ್ಯ ಇಲಾಖೆ ಸುಳ್ಯ ಇವರ ಸಹಯೋಗದಲ್ಲಿ ಕ್ಷಯ ರೋಗದ ಬಗ್ಗೆ ಜನ ಜಾಗೃತಿ ಅಂಗವಾಗಿ ಬೀದಿ ನಾಟಕವನ್ನು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಯಿತು.

ಬೀದಿ ನಾಟಕವನ್ನು ಮೂಡಬಿದಿರೆಯ ಆರೋಗ್ಯ ಟ್ರಸ್ಟ್ ನವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಸಿಟಿ ಘಟಕದ ಸ್ಥಾಪಕರಾದ ಜೇಸಿ.ಮನಮೋಹನ ಬಳ್ಳಡ್ಕ, ಘಟಕದ ಉಪಾಧ್ಯಕ್ಷ ಜೇಸಿ.ರಂಜಿತ್.ಪಿ.ಜೆ, ಜೇಸಿ.ಅಶ್ವತ್ ಅಡ್ಕಾರ್, ಸದಸ್ಯರಾದ ಜೇಸಿ ಮದನ್ ಹಾಗೂ ಸಾರ್ವಜನಿಕರು ಭಾಗವಹಿಸಿದರು.

—–ಜಾಹೀರಾತು——

Leave a Reply

You May Have Missed

error: Content is protected !!