ಅನ್ಯಕೋಮಿನ ಜೋಡಿ ಪತ್ತೆ:ಎಚ್ಚರಿಕೆ ನೀಡಿದ ಪೊಲೀಸರು

ಅನ್ಯಕೋಮಿನ ಜೋಡಿ ಪತ್ತೆ:ಎಚ್ಚರಿಕೆ ನೀಡಿದ ಪೊಲೀಸರು

ಧರ್ಮಸ್ಥಳ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅನ್ಯಕೋಮಿನ ಜೋಡಿ ತಿರುಗಾಡುತ್ತಿರುವುದನ್ನು ಪತ್ತೆ ಹಚ್ಚಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಜ.16ರಂದು ನಡೆದಿದೆ.

ಬೆಂಗಳೂರು ಮೂಲದ, ಅಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುವ ಈ ಜೋಡಿ ಲಾಡ್ಜ್ ನಲ್ಲಿ ತಂಗಲು ಯತ್ನಿಸುತ್ತಿರುವ ಸಂದರ್ಭ ಸಂಶಯಗೊಂಡ ಸಾರ್ವಜನಿಕರು ವಿಚಾರಿಸಿದ್ದಾರೆ. ಅವರ ಸಂಶಯದ ನಡೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿರುವುದಾಗಿ ವರದಿಯಾಗಿದೆ.

Leave a Reply

You May Have Missed

error: Content is protected !!