ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ರಾಮಮಂದಿರದ ಪ್ರತಿಕೃತಿಗೆ ದೀಪಾವಳಿಯಿಂದ ಶೃಂಗರಿಸಿ, ಸಾಮೂಹಿಕ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳು

ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ರಾಮಮಂದಿರದ ಪ್ರತಿಕೃತಿಗೆ ದೀಪಾವಳಿಯಿಂದ ಶೃಂಗರಿಸಿ, ಸಾಮೂಹಿಕ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳು

ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ಇಂದು ಅಯೋಧ್ಯಾ ರಾಮಮಂದಿರದ ಪ್ರಾಣಪ್ರತಿಷ್ಠೆ ಶುಭಮುಹೂರ್ತವನ್ನು ವಿಶೇಷವಾಗಿ ಶ್ರದ್ಧಾಭಕ್ತಿಶ್ರದ್ಧೆಯಿಂದ ಆಚರಿಸಲಾಯಿತು.

ಶಾಲಾ ಮಾಧವಸದನದಲ್ಲಿ ಬೃಹದಾಕಾರದ ಅಖಂಡಭಾರತದ ಮಾದರಿಯನ್ನು ಹೂ ಮತ್ತು ಹಣತೆಗಳಿಂದ ಶೃಂಗರಿಸಿ, ಅಯೋಧ್ಯಾ ರಾಮಮಂದಿರದ ಪ್ರತಿಕೃತಿ ಸ್ಥಾಪಿಸಲಾಗಿತ್ತು. ಬಳಿಕ ಅಯೋಧ್ಯಾ ರಾಮನ ಪ್ರಾಣಪ್ರತಿಷ್ಠಾ ಮುಹೂರ್ತದಲ್ಲಿ ಸಂಸ್ಥೆಯ ವಿದ್ಯಾರ್ಥಿಸಮೂಹ, ಆಡಳಿತವೃಂದ, ಶಿಕ್ಷಕವೃಂದ, ಪಾಲಕವೃಂದ ಅಖಂಡಭಾರತದ ಮಡಿಲಲ್ಲಿ ಜೋಡಿಸಿದ ರಾಮಮಂದಿರದ ಎದುರು ದೀಪಬೆಳಗಿಸಿ. ಸಾಮೂಹಿಕ ಹುಟ್ಟುಹಬ್ಬ ಆಚರಿಸಿದ್ದು. ಭಾವುಕ ಕ್ಷಣವಾಗಿತ್ತು.

ಬಳಿಕ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ ಆಲಂಕಾರಿನ ದಾಮೋದರ ಆಚಾರ್ಯ ಮತ್ತು ಮನವಳಿಕೆಯ ಗೋಪಾಲಕೃಷ್ಣ ರೈ ಅವರನ್ನು ಫಲಪುಷ್ಪ, ಶಾಲು ಹೊದಿಸಿ ಗೌರವಿಸಿ ಮಕ್ಕಳಿಗೆ ಪರಿಚಯಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರವೀಣ ಆಳ್ವ ಕುಂತೂರು ಅಯೋಧ್ಯಾ ಮಂದಿರ ವಿಶೇಷತೆಯ ಕುರಿತು ಬೌದ್ಧಿಕ್ ನೀಡಿದರು.

ರಾಮ, ಸೀತೆ, ಲಕ್ಷ್ಮಣ, ಹನುಮ ವೇಷಧಾರಿ ಶಿಶುಮಂದಿರದ ಪುಟಾಣಿಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ತದನಂತರ ಶಾಲಾ ಸಭಾಂಗಣದಲ್ಲಿ ಬೃಹತ್ ಎಲ್ಇಡಿ ಪರದೆಯಲ್ಲಿ ಅಯೋಧ್ಯಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರ ಮಕ್ಕಳಿಗೆ ತೋರಿಸಲಾಯಿತು. ಇದೇ ಸಮಯದಲ್ಲಿ ವಿದ್ಯಾರ್ಥಿಗಳ ಸ್ವಂತಿಕೆಯಿಂದ ತಯಾರಾದ ಸುಮಾರು 75ಕ್ಕೂ ಅಧಿಕ ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಮೆರುಗು ನೀಡಿತು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕರಸೇವಕ ಡಾ.ಸುರೇಶ್ ಕುಮಾರ್ ಕೂಡುರು, ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಕಾರ್ಯದರ್ಶಿ ಇಂದುಶೇಖರಶೆಟ್ಟಿ, ಸದಸ್ಯರಾದ ಈಶ್ವರ ಭಟ್ ಕೊಂಡಾಡಿ, ಶ್ರೀಧರ ಬಲ್ಯಾಯ, ಶ್ರೀಮತಿ ವಿಶಾಲಾಕ್ಷಿ ನೈಯಲ್ಗ, ಶ್ರೀಮತಿ ವಿನಯ, ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಮುಖ್ಯಮಾತಾಜಿ ಆಶಾ ಎಸ್.ರೈ,ಶ್ರೀಮಾನ್ ಸತೀಶ್ ಕುಮಾರ್ ಜಿ.ಆರ್ ..ಸಂಸ್ಥೆಯ ಎಲ್ಲಾ ಮಾತಾಜಿ ಶ್ರೀಮಾನ್ ವೃಂದದವರು ಪಾಲ್ಗೊಂಡಿದ್ದರು.

Leave a Reply

You May Have Missed

error: Content is protected !!