ದಿ ಇವಾಂಜಲಿಸ್ಟಿಕ್ ಅಸೋಸಿಯೇಷನ್ ಆಫ್ ದ ಈಸ್ಟ್ ಕರ್ನಾಟಕ ಯೂನಿಟ್ ವತಿಯಿಂದ ಶತಮಾನೋತ್ಸವದ ಪ್ರಚಾರ ವಾಹನ ರ‍್ಯಾಲಿಗೆ ಚಾಲನೆ

ದಿ ಇವಾಂಜಲಿಸ್ಟಿಕ್ ಅಸೋಸಿಯೇಷನ್ ಆಫ್ ದ ಈಸ್ಟ್ ಕರ್ನಾಟಕ ಯೂನಿಟ್ ವತಿಯಿಂದ ಶತಮಾನೋತ್ಸವದ ಪ್ರಚಾರ ವಾಹನ ರ‍್ಯಾಲಿಗೆ ಚಾಲನೆ

ಇ.ಎ.ಇ.ಯ ಶತಮಾನೋತ್ಸವದ ಪ್ರಯುಕ್ತ ಕೇರಳದ ಪೆರಿಂಬಾವೂರಿನ ಪ್ರಧಾನ ಕಚೇರಿಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಿರಿಯನ್ ಜಾಕೋ ಬೈಟ್ ಪಂಗಡದಿಂದ ಪ್ರಚಾರ ವಾಹನ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಜ.28ರಂದು ಬೆಳುವಾಯ್ ಸೈಂಟ್ ಮೇರಿಸ್ ಚರ್ಚ್ ನಿಂದ ಇ.ಎ.ಇ.ಕರ್ನಾಟಕ ಯೂನಿಟಿನ ಶತಮಾನೋತ್ಸವದ ಕನ್ವೀನರ್ ಆಗಿರುವ ರೆ|ಫಾ|ನೋಮಿಸ್ ಕುರಿಯಾಕೋಸ್ ಅವರ ನೇತೃತ್ವದಲ್ಲಿ ಅತೀ ವಂದನೀಯ ಪಿ.ಕೆ.ಅಬ್ರಹಾಂ ಕೊರಪಿಸ್ಕೋಪೋ ರವರು ಆಡಳಿತ ಮಂಡಳಿಯ ಸದಸ್ಯರಿಗೆ ಧ್ವಜ ಹಸ್ತಾಂತರಿಸುವುದರ ಮುಖಾಂತರ ರ್‍ಯಾಲಿಗೆ ಚಾಲನೆ ನೀಡಿದರು.

ಬೆಳುವಾಯಿಯಿಂದ ಆರಂಭಗೊಂಡ ವಾಹನ ರಾಲಿ ಕಕ್ಕಿಂಜ, ಶಿವಾಜೆ, ಅಡ್ಡಹೊಳೆ, ಇಚಿಲಂಪಾಡಿ, ರೆಂಜಿಲಾಡಿ, ಕುಂತೂರು ಹಾಗೂ ನೆಲ್ಯಾಡಿಯ ಸಿರಿಯನ್ ಜಾಕೋಬೈಟ್ ಚರ್ಚುಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡಿತು. ಈ ವಾಹನ ರಾಲಿಯಲ್ಲಿ ರೆ|ಫಾ| ಕುರಿಯಾಕೋಸ್ ಕವನೆಟೆಲ್, ರೆ| ಫಾ|ಮ್ಯಾಥ್ಯೂ ಜಾನ್, ರೆ|ಫಾ|ವಿಲ್ಸನ್ ಮತ್ತಾಯಿ , ರೆ|ಫಾ|ಅನೀಶ್ ಪಾರಾಶೇ ರಿಲ್, ರೆ|ಫಾ| ಎಲ್ದೊ ಕೆ.ಪಿ, ಆಡಳಿತ ಮಂಡಳಿ ಸದಸ್ಯರು ಎಲ್ಲಾ ಚರ್ಚ್ ಗಳ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!