ಡ್ರೋನ್‌ ಪ್ರತಾಪ್‌ ಸೋಲು; ಅರ್ಧ ಗಡ್ಡ, ಮೀಸೆ ತೆಗೆದ ಯುವಕ!

ಡ್ರೋನ್‌ ಪ್ರತಾಪ್‌ ಸೋಲು; ಅರ್ಧ ಗಡ್ಡ, ಮೀಸೆ ತೆಗೆದ ಯುವಕ!

ಕಡಬ:ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಡ್ರೋನ್‌ ಪ್ರತಾಪ್‌ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದು ಕಡಬದ ಯುವಕನೋರ್ವ ಇದೀಗ ವೈರಲ್‌ ಆಗಿದ್ದಾನೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್‌ ಆಬಿದ್‌ ಬಿಗ್‌ ಬಾಸ್‌ನಲ್ಲಿ ಡ್ರೋನ್‌ ಪ್ರತಾಪ್‌ ಗೆದ್ದುಬರುತ್ತಾರೆ; ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್‌ ಹಾಕಿದ್ದರು. ಅಲ್ಲದೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೂಂದು ವೀಡಿಯೋ ಹರಿಯಬಿಟ್ಟಿದ್ದರು.

ಇದೀಗ ಕಾರ್ತಿಕ್‌ ವಿನ್ನರ್‌ ಆಗಿದ್ದು, ಪ್ರತಾಪ್‌ ರನ್ನರ್‌ ಅಪ್‌ಗೆ ಸಮಾಧಾನ ಪಟ್ಟುಕೊಂಡಿದ್ದಾರೆ. ಫಲಿತಾಂಶ ಹೊರಬರುತ್ತಲೇ ಆಬಿದ್‌ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಮಾಡಿ ಅಪ್ಲೋಡ್‌ ಮಾಡಿದ್ದಾರೆ.

Leave a Reply

You May Have Missed

error: Content is protected !!