ಕಾರು, ಬೈಕ್ ಢಿಕ್ಕಿ; ಸವಾರ ಸಾವು

ಕಾರು, ಬೈಕ್ ಢಿಕ್ಕಿ; ಸವಾರ ಸಾವು

ಕಾರು ಮತ್ತು ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಮಧ್ವ ಎಂಬಲ್ಲಿ ಜ.1ರ ಗುರುವಾರ ಸಂಜೆ ಸಂಭವಿಸಿದೆ.

ಬೈಕ್ ಸವಾರ, ಉಜಿರೆ ಟಿ.ಬಿ.ಕ್ರಾಸ್ ಬಳಿಯ ನಿವಾಸಿ ಪ್ರದೀಶ್ ಶೆಟ್ಟಿ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಾರು ಮತ್ತು ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಪ್ರದೀಶ್ ಅವರ ಮೋಟಾರ್ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಪ್ರದೀಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಕಾರಿನ ಚಾಲಕ, ಕಾರಿನಲ್ಲಿದ್ದ ಮಹಿಳೆ ಮತ್ತು ಮಗುವಿಗೂ ಗಾಯಗಳಾಗಿರುತ್ತದೆ. ಗಾಯಗೊಂಡವರನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯದಲ್ಲಿ ಪ್ರದೀಶ್ ಮೃತಪಟ್ಟಿದ್ದರು.
ಅಪಘಾತದಿಂದಾಗಿ ಎರಡೂ ವಾಹನಗಳು ಜಖಂಗೊಂಡಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Previous post

ಸುಖಿ ಸಮಾಜ ನಿರ್ಮಾಣವಾಗಬೇಕಾದರೆ ಯುವಕರು ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು- ಪುರಂದರ ರೈ ಮಿತ್ರಂಪಾಡಿ

Next post

ನೆಲ್ಯಾಡಿ: ಸಹಕಾರ ಸಂಘಕ್ಕೆ 916 ಹಾಲ್ ಮಾರ್ಕ್ ಇರುವ ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚನೆ; ವ್ಯವಸ್ಥಾಪಕಿಯಿಂದ ಪೊಲೀಸರಿಗೆ ದೂರು

Leave a Reply

You May Have Missed

error: Content is protected !!