ಹಿಮ್ಮುಖವಾಗಿ ಚಲಿಸಿದ ಬಸ್‌: ವಾಹನಗಳಿಗೆ ಹಾನಿ

ಹಿಮ್ಮುಖವಾಗಿ ಚಲಿಸಿದ ಬಸ್‌: ವಾಹನಗಳಿಗೆ ಹಾನಿ

ಉಪ್ಪಿನಂಗಡಿ: ಖಾಸಗಿ ಬಸ್ಸೊಂದನ್ನು ಅಜಾಗರೂಕತೆಯಿಂದ ಚಾಲಕ ಹಿಮ್ಮಖವಾಗಿ ಚಲಿಸಿದ್ದರಿಂದ ಎರಡು ಅಂಗಡಿಗಳು ಜಖಂಗೊಂಡು ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಸೇರಿದಂತೆ ಹಲವು ದ್ವಿಚಕ್ರ ವಾಹನಗಳಿಗೆ ಹಾನಿಯಾದ ಘಟನೆ ಉಪ್ಪಿನಂಗಡಿ ಬಸ್‌ ನಿಲ್ದಾಣದಲ್ಲಿ ಮಾ.2ರಂದು ಸಂಜೆ ನಡೆದಿದೆ.

ಚಾಲಕ ಬಸ್‌ ಅನ್ನು ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಅದು ವಾಹನಗಳ ಪಾರ್ಕಿಂಗ್‌ ಪ್ರದೇಶ ದಾಟಿ ವಾಣಿಜ್ಯ ಕಟ್ಟಡಕ್ಕೆ ನುಗ್ಗಿದ್ದರಿಂದ ಕೆಲವು ಅಂಗಡಿಗಳಿಗೆ . ಇದರಿಂದ ನಾಗರಾಜ್‌ ಭಟ್‌ ಎಂಬವರ ಸಿಹಿತಿಂಡಿ ಮತ್ತು ತಂಪು ಪಾನೀಯ ಮಾರಾಟದ ಅಂಗಡಿಗೆ ಹಾಗೂ ಅನಿಲ್‌ ಕುಮಾರ್‌ ಹಾನಿಯಾಗಿದೆ. ಕಬ್ಬು ಅರೆಯುವ ಯಂತ್ರ ಸೇರಿದಂತೆ ಅಂಗಡಿಯ ಕಪಾಟುಗಳಿಗೂ ಹಾನಿಯಾಗಿದೆ.

ಈ ಖಾಸಗಿ ಬಸ್‌ ವಾಹನಗಳ ಪಾರ್ಕಿಂಗ್‌ ಪ್ರದೇಶ ದಾಟಿ ಬಂದಿದ್ದರಿಂದ ಮೂರ್‍ನಾಲ್ಕು ದ್ವಿಚಕ್ರ ವಾಹನ ಹಾಗೂ ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಈ ದುರ್ಘ‌ಟನೆಯ ಸಂದರ್ಭ ಅಲ್ಲಿ ಬೆರಳೆಣಿಕೆ ಜನರಷ್ಟೇ ಇದ್ದು, ಅವರು ಅಲ್ಲಿಂದ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್‌ ಅಂಗಡಿಯವರು ಅಪಾಯದಿಂದ ಪಾರಾಗಿದ್ದಾರೆ.

Leave a Reply

You May Have Missed

error: Content is protected !!